ನವದೆಹಲಿ: ವಾರಾಂತ್ಯದಲ್ಲಿ ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಷ್ಯಾ–ಉಕ್ರೇನ್ ಸಂಘರ್ಷ ಮತ್ತು ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಅತಿಕ್ರಮಣ ವಿಷಯಗಳ ಕುರಿತು ಪ್ರಮುಖವಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಜರ್ಮನಿ ರಾಯಭಾರಿ ಫಿಲಿಪ್ ಅಕರ್ಮನ್ ಅವರು
ಬುಧವಾರ ತಿಳಿಸಿದರು.

ಉಕ್ರೇನ್ ವಿರುದ್ಧದ ದ್ವೇಷಕ್ಕೆ ಕೊನೆ ಹಾಡಬೇಕು ಮತ್ತು ಶಾಂತಿ ಸ್ಥಾಪಿಸಬೇಕು ಎಂದು ಕರೆ ನೀಡಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯವನ್ನು ಅನುಮೋದಿಸುವಂತೆ ಭಾರತವನ್ನು ಕೋರಲಿದ್ದಾರೆ ಎಂದೂ ತಿಳಿಸಿದರು.

ಓಲಾಫ್ ಸ್ಕೋಲ್ಜ್ ಅವರು ಫೆ. 25 ಮತ್ತು 26ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಚಾನ್ಸಲರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಅವರು ಭಾರತದ ಪ್ರವಾಸ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.