ಹಾಂಗ್ಕಾಂಗ್: ಆ್ಯಂಟ್ ಸಮೂಹವು ತನ್ನ ಸಂಸ್ಥಾಪಕ ಜಾಕ್ ಮಾ ಅವರಿಗೆ ಸಮೂಹದಿಂದ ಹೊರನಡೆಯಲು, ತಮ್ಮ ಷೇರುಗಳನ್ನು ಮಾರಾಟ ಮಾಡಲು, ಕಂಪನಿಯ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಲು ಮಾರ್ಗಗಳನ್ನು ಅರಸುತ್ತಿದೆ!

ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ) ಹಾಗೂ ಚೀನಾ ಬ್ಯಾಂಕಿಂಗ್ ಮತ್ತು ವಿಮಾ ನಿಯಂತ್ರಣ ಆಯೋಗದ (ಸಿಬಿಐಆರ್ಸಿ) ಅಧಿಕಾರಿಗಳು ಮಾ ಹಾಗೂ ಆ್ಯಂಟ್ ಕಂಪನಿ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಮಾ ಅವರನ್ನು ಕಂಪನಿಯಿಂದ ಹೊರಗೆ ಕಳುಹಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಮಾ ಅವರು ಹೊಂದಿರುವ ಷೇರುಪಾಲನ್ನು ಅವರಿಂದ ಹಿಂದಕ್ಕೆ ಪಡೆಯವ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ಆ್ಯಂಟ್ ಸಮೂಹ ಪ್ರತಿಕ್ರಿಯೆ ನೀಡಿದೆ. ‘ಮಾ ಅವರು ಹೊಂದಿರುವ ಷೇರುಗಳನ್ನು ಕಂಪನಿಯ ಹಾಲಿ ಹೂಡಿಕೆದಾರರಿಗೇ ಮಾರಾಟ ಮಾಡಬಹುದು ಎಂಬುದು ಕಂಪನಿ ಹೊಂದಿರುವ ಭರವಸೆ’ ಎಂದು ಮೂಲವೊಂದು ಹೇಳಿದೆ.

‘ಮಾ ಅವರಿಗೆ ತಮ್ಮ ಷೇರುಗಳನ್ನು ಆಪ್ತರಿಗೆ ಮಾರಾಟ ಮಾಡಲು ಅವಕಾಶವಿಲ್ಲ. ಅವರು ತಮ್ಮ ಷೇರುಗಳನ್ನು ಸರ್ಕಾರದ ಜೊತೆ ಗುರುತಿಸಿಕೊಂಡ ಚೀನಾದ ಹೂಡಿಕೆದಾರರೊಬ್ಬರಿಗೆ ವರ್ಗಾವಣೆ ಮಾಡಬಹುದು. ಮಾ ಅವರು ಕಂಪನಿಯಿಂದ ಸಂಪೂರ್ಣವಾಗಿ ಹೊರನಡೆಯಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ’ ಎಂದು ಇನ್ನೊಂದು ಮೂಲ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.