ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (SCO) ಸಭೆಯಲ್ಲಿ ಭಾಗವಹಿಸಲು ತೆರಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ರಾತ್ರಿ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾದರು.

ಇಸ್ಲಾಮಾಬಾದ್ನ ಈ ಭೇಟಿಯ ವೇಳೆ ಸಚಿವ ಎಸ್. ಜೈಶಂಕರ್ ಹಾಗೂ ಶಹಭಾಜ್ ಷರೀಪ್ ಪರಸ್ಪರ ಕೈ ಕುಲುಕಿದರು.

SCO ಸಭೆಯ ಆಹ್ವಾನಿತ ಗಣ್ಯರಿಗೆ ಮಂಗಳವಾರ ರಾತ್ರಿ ಶಹಭಾಜ್ ಷರೀಪ್ ಅವರು ತಮ್ಮ ನಿವಾಸದಲ್ಲಿ ಔತಣಕೂಟದ ಏರ್ಪಡಿಸಿದ್ದರು. ಈ ವೇಳೆ ಷರೀಪ್ ಹಾಗೂ ಜೈಶಂಕರ್ ಅವರು ಔಪಚಾರಿಕವಾಗಿ ಅಷ್ಟೇ ಮಾತುಕತೆ ನಡೆಸಿದರು.

ವಿಶೇಷವೆಂದರೆ ಔತಣಕೂಟಕ್ಕೂ ಮುನ್ನ ಭರತನಾಟ್ಯ ಕಾರ್ಯಕ್ರಮವನ್ನು ಪಾಕ್ ಪ್ರಧಾನಿಯವರು ಏರ್ಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಭಾರತೀಯ ಹೈಕಮಿಷನರ್ ಕಚೇರಿಯಲ್ಲಿ ತಂಗಿದ್ದ ಜೈಶಂಕರ್ ಅವರು ಇಂದು ಬೆಳಿಗ್ಗೆ ನಸುಕಿನ ಜಾವ ಎದ್ದು ಕಚೇರಿ ಸಿಬ್ಬಂದಿ ಜೊತೆ ವಾಕಿಂಗ್ ಮಾಡಿದ್ದಾರೆ. ಕಚೇರಿ ಆವರಣದಲ್ಲಿ ಗಿಡ ನೆಟ್ಟಿದ್ದಾರೆ.

ಕಾಶ್ಮೀರ ಸಮಸ್ಯೆ ಮತ್ತು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿರುವಾಗ, ಸುಮಾರು ಒಂಬತ್ತು ವರ್ಷಗಳ ನಂತರ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವರಾಗಿದ್ದಾಗ 2015ರ ಡಿಸೆಂಬರ್ನಲ್ಲಿ ಇಸ್ಲಾಮಾಬಾದ್ಗೆ ಭೇಟಿ ನೀಡಿದ್ದರು.

ರಷ್ಯಾ ಮತ್ತು ಚೀನಾ 1996 ಮತ್ತು 2001ರ ನಡುವೆ ನ್ಯಾಟೊಗೆ ಪ್ರತಿಯಾಗಿ ಕಾರ್ಯತಂತ್ರದ ಭಾಗವಾಗಿ ಕಾರ್ಯನಿರ್ವಹಿಸಲು ಎಸ್ಸಿಒ ಪ್ರಾರಂಭಿಸಿದವು. ಈ ಬಣವನ್ನು ಭಾರತ ಮತ್ತು ಪಾಕಿಸ್ತಾನ 2017ರಲ್ಲಿ ಸೇರಿದವು. 2023 ಮತ್ತು 2024ರಲ್ಲಿ ಇರಾನ್ ಮತ್ತು ಬೆಲಾರೂಸ್ ಸೇರ್ಪಡೆಯೊಂದಿಗೆ ಎಸ್ಸಿಒ ಬಣವು ಪ್ರಸ್ತುತ 10 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.