ಢಾಕಾ: ಬಾಂಗ್ಲಾದೇಶದಲ್ಲಿ ಫೇಸ್‌ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿ ದೇವಸ್ಥಾನ ಮತ್ತು ಹಿಂದು ಸಮುದಾಯದವರ ಮನೆ ಮೇಲಿನ ದಾಳಿ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.

ನರೈಲ್ ಜಿಲ್ಲೆಯ ಲೋಹಗರಾದ ದಿಘಾಲಿಯ ಬಜಾರ್ ಪ್ರದೇಶದಲ್ಲಿ ಶುಕ್ರವಾರ ದೇವಸ್ಥಾನವೊಂದರಲ್ಲಿ ದಾಂಧಲೆ ನಡೆಸಿದ್ದ ದುಷ್ಕರ್ಮಿಗಳು, ಬಳಿಕ ಹಿಂದು ಸಮುದಾಯದವರ ಮನೆ ಮತ್ತು ಅಂಗಡಿ ಮೇಲೆ ದಾಳಿ ನಡೆಸಿ, ಹಾನಿಯುಂಟುಮಾಡಿದ್ದರು.

ಫೇಸ್‌ಬುಕ್‌ನಲ್ಲಿ ಮಾಡಲಾಗಿದ್ದ ಪೋಸ್ಟ್ ಒಂದಕ್ಕೆ ಸಂಬಂಧಿಸಿ ಮುಸ್ಲಿಂ ಸಮುದಾಯದ ಯುವಕರು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ ಎಂದು ಬಾಂಗ್ಲಾದ ಮಾಧ್ಯಮಗಳು ವರದಿ ಮಾಡಿದ್ದವು.

ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಬಾಂಗ್ಲಾದೇಶ: ಫೇಸ್‌ಬುಕ್ ಪೋಸ್ಟ್ ಕಾರಣಕ್ಕೆ ಹಿಂದೂ ಮಂದಿರ, ಮನೆಗಳ ಧ್ವಂಸ

ಬಂಧಿತರನ್ನು ಮಾಸೂಮ್ ಬಿಲ್ಲಾ, ಎಂಡಿ ಸಯೀದ್ ಶೇಖ್, ರೆಝುಲ್ ಶೇಖ್, ರಸೇಲ್ ಮ್ರಿಧಾ ಮತ್ತು ಕಬೀರ್ ಗಾಝಿ ಎಂದು ಗುರುತಿಸಲಾಗಿದೆ.

ಚೀನಾದಲ್ಲಿನ ಇಸ್ಲಾಂ ಧರ್ಮ ಚೀನೀ ದೃಷ್ಟಿಕೋನಕ್ಕೆ ಬದ್ಧವಾಗಿರಬೇಕು: ಜಿನ್ಪಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.