ಲಂಡನ್: 11 ಕೋಟಿ ವರ್ಷಗಳ ಹಿಂದೆ ಬ್ರಿಟನ್ನಲ್ಲಿ ನಡೆದಾಡಿದ್ದವು ಎನ್ನಲಾದ ಕನಿಷ್ಠ ಆರು ವಿಭಿನ್ನ ಜಾತಿಯ ಡೈನೋಸಾರ್ಗಳ ಕೊನೆ ಸಂತತಿಯ ಹೆಜ್ಜೆಗುರುತುಗಳು ಕೆಂಟ್ ಎಂಬಲ್ಲಿ ಪತ್ತೆಯಾಗಿವೆ ಎಂದು ಸಂಶೋಧಕರ ಹೊಸ ವರದಿಯಲ್ಲಿ ಹೇಳಲಾಗಿದೆ.

‘ಹೇಸ್ಟಿಂಗ್ಸ್ ಮ್ಯೂಸಿಯಂ ಆ್ಯಂಡ್ ಆರ್ಟ್ ಗ್ಯಾಲರಿ‘ಯ ಕ್ಯುರೇಟರ್ ಮತ್ತು ಪೋರ್ಟ್ಸ್ಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಡೈನೋಸಾರ್ ಹೆಜ್ಜೆಗುರುತುಗಳನ್ನು ಕಂಡುಹಿಡಿದಿದ್ದಾರೆ.

ಕೆಂಟ್ನ ಫೋಕ್ಸ್ಟೋನ್ ನಾಲೆಯ ತೀರ ಪ್ರದೇಶದ ಕಡಿದಾದ ಬಂಡೆಗಳ ಬಳಿ ಹೆಜ್ಜೆಗುರುತುಗಳು ಪತ್ತೆಯಾಗಿವೆ. ಈ ಭಾಗದಲ್ಲಿ ಪಳೆಯುಳಿಕೆಗಳು ಆಗಾಗ್ಗೆ ಪತ್ತೆಯಾಗುತ್ತಿರುತ್ತವೆ.

‘ಫೋಕ್ಸ್ಟೋನ್ ರಚನೆ‘ ಎಂದು ಕರೆಯಲ್ಪಡುವ ಸ್ತರಗಳಲ್ಲಿ ಡೈನೋಸಾರ್ ಹೆಜ್ಜೆಗುರುತುಗಳು ಕಂಡುಬಂದಿರುವುದು ಇದೇ ಮೊದಲು. ಇದು ಅಸಾಧಾರಣವಾದ ಸಂಶೋಧನೆ. ಏಕೆಂದರೆ ಡೈನೋಸಾರ್ಗಳು ಅಳಿವಿಗೆ ಜಾರುವುದಕ್ಕೂ ಮೊದಲು ಈ ದೇಶದಲ್ಲಿ ಕೊನೆಯದಾಗಿ ಸಂಚರಿಸಿವೆ‘ ಎಂದು ಪೋರ್ಟ್ಸ್ಮೌತ್ ವಿಶ್ವವಿದ್ಯಾಲಯದ ಪಾಲಿಯೊಬಯಾಲಜಿ ಪ್ರಾಧ್ಯಾಪಕ ಡೇವಿಡ್ ಮಾರ್ಟಿಲ್ ಹೇಳಿದ್ದಾರೆ.

ಸಂಶೋಧನೆ ವರದಿಯನ್ನು ‘ಪ್ರೊಸೀಡಿಂಗ್ಸ್ ಆಫ್ ದಿ ಜಿಯಾಲಜಿಸ್ಟ್ಸ್ಅಸೋಸಿಯೇಷನ್’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ, ಕೆಲವು ಹೆಜ್ಜೆಗುರುತುಗಳನ್ನು ಫೋಕ್ಸ್ಟೋನ್ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.