ಕೇಪ್ ಕೆನವೆರಲ್: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಕಾಲ ಕಾರ್ಯನಿರ್ವಹಿಸಿದ ನಾಲ್ಕು ದೇಶಗಳ ನಾಲ್ವರು ಗಗನಯಾತ್ರಿಗಳು ಮಂಗಳವಾರ ಸ್ಪೇಸ್ಎಕ್ಸ್ ನೌಕೆಯ ಮೂಲಕ ಭೂಮಿಗೆ ಮರಳಿದರು.

ನಾಸಾದ ಹೆಲಿಕಾಪ್ಟರ್ ಪೈಲಟ್ ಜಾಸ್ಮಿನ್ ಮೊಘ್ಬೆಲಿ, ಡೆನ್ಮಾರ್ಕ್ನ ಆಂಡ್ರಿಯಾಸ್ ಮೊಗೆನ್ಸೆನ್, ಜಪಾನ್ನ ಸತೋಶಿ ಫುರುಕಾವಾ ಮತ್ತು ರಷ್ಯಾದ ಕಾನ್ಸ್ಟಾಂಟಿನ್ ಬೊರಿಸೊವ್ ಅವರಿದ್ದ ನೌಕೆಯು ಫ್ಲಾರಿಡಾ ಪ್ಯಾನ್ಹ್ಯಾಂಡಲ್ ಸಮೀಪದ ಮೆಕ್ಸಿಕೊದ ಕೊಲ್ಲಿಯಲ್ಲಿ ಮಂಗಳವಾರ ನಸುಕಿನಲ್ಲಿ ಸುರಕ್ಷಿತವಾಗಿ ಬಂದಿಳಿಯಿತು.

ಇವರು ಕಳೆದ ಆಗಸ್ಟ್ನಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಇವರ ಕಾರ್ಯಾಚರಣೆಯ ಅವಧಿ ಪೂರ್ಣಗೊಂಡಿದ್ದರಿಂದ, ಇವರ ಸ್ಥಾನಕ್ಕೆ ಬದಲಿ ಗಗನಯಾನಿಗಳನ್ನು ಹೊತ್ತು ಸ್ಪೇಸ್ಎಕ್ಸ್ ನೌಕೆಯು ಕಳೆದ ವಾರ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿತ್ತು.

‘ನಾವು ನಿಮಗೆ ಒಂದಿಷ್ಟು ಬೆಣ್ಣೆ ಮತ್ತು ರೊಟ್ಟಿಗಳನ್ನು ಬಿಟ್ಟುಬಂದಿದ್ದೇವೆ’ ಎಂದು ಮೊಘ್ಬೆಲಿ ಅವರು ಸೋಮವಾರ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸುವಾಗ ರೇಡಿಯೊ ಸಂದೇಶವನ್ನು ಬಾಹ್ಯಾಕಾಶ ನಿಲ್ದಾಣದಲ್ಲಿರುವರಿಗೆ ನೀಡಿದ್ದಾರೆ. ಇದಕ್ಕೆ ನಾಸಾದ ಲೋರಲ್ ಒ'ಹಾರಾ ಅವರು ‘ಆ ಉದಾರ ಉಡುಗೊರೆಗೆ ಧನ್ಯವಾದಗಳು’ ಎಂದು ಪ್ರತಿಕ್ರಿಯಿಸಿದ್ದಾರೆ.

ರಷ್ಯಾದ ಸೋಯುಜ್ ನೌಕೆಯಲ್ಲಿ ಭೂಮಿಗೆ ಬರುವ ಮೊದಲು ಓ'ಹಾರಾ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಇನ್ನೂ ಕೆಲವು ವಾರಗಳನ್ನು ಕಳೆಯಲಿದ್ದಾರೆ.

ಬಾಹ್ಯಾಕಾಶ ನಿಲ್ದಾಣದಿಂದ ಹೊರಡುವ ಮುನ್ನ, ಮೊಗೆನ್ಸೆನ್ ಅವರು ‘ಮರಗಳಲ್ಲಿ ಪಕ್ಷಿಗಳು ಹಾಡುವುದನ್ನು ಕೇಳಲು ಮತ್ತು ಕುರುಕುಲು ತಿಂಡಿ ತಿನ್ನಲು ಇನ್ನು ನನ್ನಿಂದ ಕಾಯಲು ಸಾಧ್ಯವಿಲ್ಲ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.