ಬ್ಯಾಂಕಾಕ್ :ಮ್ಯಾನ್ಮಾರ್ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಇನ್ನೂ ಎರಡು ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ಇಲ್ಲಿನ ನ್ಯಾಯಾಲಯ ಘೋಷಿಸಿ, ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.

ಹೀಗಾಗಿ ಸೂಕಿ ಅವರು ಈ ಹಿಂದಿನ ಅಪರಾಧಗಳಿಗೆ ವಿಧಿಸಿದ್ದ ಶಿಕ್ಷೆಯೂ ಸೇರಿ ಒಟ್ಟು 26 ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾದಕ ವಸ್ತು ಕಳ್ಳಸಾಗಣೆಗೆ ಉದ್ಯಮಿ ಮಾಂಗ್ ವೀಕ್ ಅವರಿಂದ 5.50 ಲಕ್ಷ ಡಾಲರ್ (₹4.52 ಕೋಟಿ) ಲಂಚ ಪಡೆದ ಪ್ರಕರಣದಲ್ಲಿಸೂಕಿ ಅವರಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಆದರೆ ಈ ಆರೋಪವನ್ನು ಸೂಕಿ ನಿರಾಕರಿಸಿದ್ದಾರೆ.

ಮ್ಯಾನ್ಮಾರ್ ಸೇನೆ 2021ರ ಫೆಬ್ರುವರಿ 1ರಂದು ಚುನಾಯಿತ ಸರ್ಕಾರವನ್ನು ಕಿತ್ತೆಸೆದು, 77 ವರ್ಷದ ಸೂಕಿ ಅವರನ್ನು ಬಂಧಿಸಿ ಭ್ರಷ್ಟಾಚಾರ, ವಲಸೆ ಕಾನೂನು ಉಲ್ಲಂಘನೆ ಸೇರಿ ವಿವಿಧ ಪ್ರಕರಣದಲ್ಲಿ ಶಿಕ್ಷೆ ವಿಧಿಸಿ ಜೈಲಿನಲ್ಲಿರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.