ಕರಾಚಿ: ಬಿಸಿಗಾಳಿಯ ತೀವ್ರತೆಯಿಂದ ಪಾಕಿಸ್ತಾನದ ಅತಿದೊಡ್ಡ ನಗರವಾಗಿರುವ ಕರಾಚಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 450 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರೇತರ ಸಂಸ್ಥೆ ಎಧಿ ಫೌಂಡೇಶನ್ ಬುಧವಾರ ತಿಳಿಸಿದೆ.

ಬಂದರು ನಗರವಾಗಿರುವ ಕರಾಚಿಯಲ್ಲಿ ಶನಿವಾರದಿಂದ 40ಕ್ಕಿಂತ ಹೆಚ್ಚು ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗುತ್ತಿದೆ. ಜೊತೆಗೆ ಕರಾವಳಿ ಪ್ರದೇಶಗಳಲ್ಲಿ ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಿದೆ.

ಈ ಕುರಿತು ಪ್ರತಿಕ್ರಿಯಿಸಿದ ಎಧಿ ಫೌಂಡೇಶನ್ ಮುಖ್ಯಸ್ಥ ಫೈಸಲ್ ಎಧಿ, ‘ಕರಾಚಿಯಲ್ಲಿ ನಾವು ಶವಾಗಾರವನ್ನು ನಿರ್ವಹಿಸುತ್ತಿದ್ದೇವೆ. ಹೆಚ್ಚುವರಿಯಾಗಿ ಬರುವ ಶವಗಳನ್ನು ಇಡಲು ಶವಾಗಾರದಲ್ಲಿ ಸ್ಥಳಾವಕಾಶವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಶವಗಳ ಪೈಕಿ ಹೆಚ್ಚು ತಾಪಮಾನದ ಹೊರತಾಗಿಯೂ, ವಿದ್ಯುತ್ ಅಭಾವ ಎದುರಿಸುತ್ತಿರುವ ಪ್ರದೇಶಗಳಿಂದ ಬಂದ ಶವಗಳೇ ಹೆಚ್ಚಿವೆ ಎಂಬುದು ಆಘಾತಕಾರಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.