ಹ್ಯೂಸ್ಟನ್: ಭಾನುವಾರ ಎನ್ಆರ್ಜಿ ಕ್ರೀಡಾಂಗಣದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎನ್ಬಿಎ ಬಾಸ್ಕೆಟ್ ಬಾಲ್ ಕ್ರೀಡಾಕೂಟಕ್ಕೆ ನನ್ನನ್ನು ಆಹ್ವಾನಿಸುತ್ತೀರಾ ಎಂದು ನರೇಂದ್ರ ಮೋದಿಯವರಲ್ಲಿ ಕೇಳಿದ್ದಾರೆ.

ಅಮೆರಿಕ ಮತ್ತು ಭಾರತ ನಡುವಿನ ಆತ್ಮೀಯ ಸಂಬಂಧದ ಬಗ್ಗೆ ಮಾತನಾಡಿದ ಟ್ರಂಪ್, ಎನ್ಬಿಎ ಬಾಸ್ಕೆಟ್ಬಾಲ್ ಕ್ರೀಡಾಕೂಟ ಭಾರತಕ್ಕೆ ಕಾಲಿಟ್ಟಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ:ಅಮೆರಿಕದಲ್ಲಿ ಮೋದಿ ಮೋಡಿ; ಟ್ರಂಪ್ಗೆ ಚುನಾವಣೆ ಸಿದ್ಧತೆ

ಮುಂದಿನ ವಾರ ಭಾರತದ ಮುಂಬೈನಲ್ಲಿ ಪ್ರಥಮ ಎನ್ಬಿಎ ಬಾಸ್ಕೆಟ್ಬಾಲ್ ಕ್ರೀಡಾಕೂಟ ನಡೆಯಲಿದ್ದು, ಸಾವಿರಾರು ಮಂದಿ ಕ್ರೀಡಾಕೂಟವನ್ನು ವೀಕ್ಷಿಸಲಿದ್ದಾರೆ. ಈ ಕ್ರೀಡಾಕೂಟಕ್ಕೆ ನನಗೆ ಆಹ್ವಾನವಿದೆಯೇ? ನಾನು ಬಂದರೂ ಬರಬಹುದು ಎಂದು ಟ್ರಂಪ್ ಹೇಳಿದಾಗ ಸಭೆಯಲ್ಲಿ ನಗೆಯುಕ್ಕಿತು.

ಅಕ್ಟೋಬರ್ 4 ಮತ್ತು 5 ರಂದು ಮುಂಬೈನಲ್ಲಿ ಸಕ್ರಮೆಂಟೊ ಕಿಂಗ್ಸ್ ಮತ್ತು ಇಂಡಿಯನ್ ಪೇಸರ್ಸ್ ತಂಡಗಳ ನಡುವೆ ಎರಡು ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ:ಅಮೆರಿಕದಲ್ಲಿ ಹೌಡಿ ಮೋದಿ: ‘370 ವಿಧಿ ರದ್ದು’–ಮೋದಿ ಸಮರ್ಥನೆ

50,000 ಭಾರತೀಯರು- ಅಮೆರಿಕನ್ನರು ಭಾಗವಹಿಸಿದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್, ತಂತ್ರಜ್ಞಾನಕ್ಕೆ ಭಾರತ ಮತ್ತು ಅಮೆರಿಕ ನೀಡಿರುವ ಕೊಡುಗೆಗಳನ್ನು ಕೊಂಡಾಡಿದ್ದಾರೆ. ಜನಜೀವನ ಸುಧಾರಣೆ ಮತ್ತು ಜಗತ್ತಿನಲ್ಲಿ ಬದಲಾವಣೆ ತರುವುದಕ್ಕಾಗಿ ಭಾರತೀಯರು ಮತ್ತು ಅಮೆರಿಕನ್ನರು ತಂತ್ರಜ್ಞಾನದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಹ್ಯೂಸ್ಟನ್: ಹೂ ಎತ್ತಿಕೊಟ್ಟ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.