ಸ್ಯಾನ್ ಬರ್ನಾಡಿನೊ (ಕ್ಯಾಲಿಫೋರ್ನಿಯಾ): ದಕ್ಷಿಣ ಕ್ಯಾಲಿಫೋರ್ನಿಯಾದ ಮೌಂಟ್ ಬಾಡ್ಲಿ ಪರ್ವತದಲ್ಲಿ ಚಾರಣಿಗರಿಗೆ ಶನಿವಾರದಂದು ಮಾನವ ದೇಹದ ಅವಶೇಷಗಳು ಪತ್ತೆಯಾಗಿವೆ.

ಬ್ರಿಟಿಷ್ ನಟ ಜುಲಿಯನ್ ಸ್ಯಾಂಡ್ಸ್ ಐದು ತಿಂಗಳ ಹಿಂದೆ ಇದೇ ಪರ್ವತ ಪ್ರದೇಶದಲ್ಲಿ ನಾಪತ್ತೆಯಾಗಿದ್ದರು.

‘ದೇಹವು ಮೌಂಟ್ ಬಾಡ್ಲಿಯ ಕಾಡಿನಲ್ಲಿ ಬೆಳಿಗ್ಗೆ 10 ಗಂಟೆಗೆ ದೊರೆತಿದೆ. ಮುಂದಿನ ವಾರ ಈ ದೇಹದ ಗುರುತು ಪತ್ತೆ ಮಾಡುವ ಪ್ರಕ್ರಿಯೆಗಾಗಿ ತನಿಖಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ’ ಎಂದು ಅವರು ಹೇಳಿದರು.

ಈ ಕುರಿತಂತೆ ಯಾವುದೇ ರೀತಿಯ ಹೆಚ್ಚಿನ ಮಾಹಿತಿ ದೊರಕಿಲ್ಲ.

ಚಾರಣಿಗ ಹಾಗೂ ಪರ್ವತಾರೋಹಿಯೂ ಆಗಿದ್ದ ಜುಲಿಯನ್ ಅವರು ಜನವರಿ 13ರಂದು ಪೂರ್ವ ಲಾಸ್ ಏಂಜಲೀಸ್‌ನ ಬಟ್ಟದ ತುದಿಗೆ ಹೋದಾಗ ನಾಪತ್ತೆಯಾಗಿದ್ದರು. ಅವರು ಚಾರಣಕ್ಕೆ ತೆರಳಿದ್ದ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಚಳಿಗಾಲದ ಭೀಕರ ಬಿರುಗಾಳಿ ಬೀಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.