ಸಿಂಗಪುರ: ಭಾರತೀಯ ವಾಯುಪಡೆಯ ಸಾರಂಗ್ ಹೆಲಿಕಾಪ್ಟರ್‌ಗಳು ಸಿಂಗಪುರ ವೈಮಾನಿಕ ಪ್ರದರ್ಶನದಲ್ಲಿ ಕಸರತ್ತು ತೋರಲು ಭರ್ಜರಿ ಸಿದ್ಧತೆ ನಡೆಸಿವೆ.

ಸಿಂಗಪುರ ವೈಮಾನಿಕ ಪ್ರದರ್ಶನ ಮಂಗಳವಾರ ಆರಂಭವಾಗಿದ್ದು, ಫೆಬ್ರುವರಿ 25 ರಂದು ಕೊನೆಗೊಳ್ಳಲಿದೆ. ಸಾರಂಗ್ ತಂಡದ ಪ್ರದರ್ಶನ ವಾರಾಂತ್ಯದಲ್ಲಿ ನಡೆಯಲಿದೆ.

‘ಸಿಂಗಪುರ ಎಕ್ಸಿಬಿಷನ್ ಸೆಂಟರ್‘ನಲ್ಲಿ ನಡೆಯುತ್ತಿರುವ ಈ ಪ್ರದರ್ಶನದಲ್ಲಿ 50 ದೇಶಗಳ ಸಾವಿರಕ್ಕೂ ಅಧಿಕ ಕಂಪನಿಗಳು ಪಾಲ್ಗೊಂಡಿವೆ. ಸಾರಂಗ್ ತಂಡದ ಐದು ಹೆಲಿಕಾಪ್ಟರ್‌ಗಳು ಭಾಗವಹಿಸಿವೆ.

‘71 ಸದಸ್ಯರನ್ನೊಳಗೊಂಡ ಸಾರಂಗ್ ತಂಡವು ಸಿಂಗಪುರದ ಜನರ ಮುಂದೆ ಮೈನವಿರೇಳಿಸುವ ಪ್ರದರ್ಶನ ನೀಡಲು ಎಲ್ಲ ತಯಾರಿ ನಡೆಸಿದೆ’ ಎಂದು ವಿಂಗ್ ಕಮಾಂಡರ್ ಆಶೀಶ್ ಮೋಗೆ ಶುಕ್ರವಾರ ತಿಳಿಸಿದರು.

‘ವಿಶ್ವದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿರುವ ಸಿಂಗಪುರ ಏರ್ ಶೋನಲ್ಲಿ ಭಾರತೀಯ ವಾಯುಪಡೆಯನ್ನು ಪ್ರತಿನಿಧಿಸುವ ಅವಕಾಶ ಲಭಿಸಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

ಫೆಬ್ರುವರಿ 12 ರಂದು ಸಿಂಗಪುರಕ್ಕೆ ಬಂದಿಳಿದಿರುವ ಸಾರಂಗ್ ತಂಡವು ಮಂಗಳವಾರ ಮತ್ತು ಬುಧವಾರ ಪೂರ್ವಭಾವಿ ತಾಲೀಮು ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.