ವಾಷಿಂಗ್ಟನ್: ಭಾರತದಲ್ಲಿ ಉದ್ಯೋಗದ ಸ್ಥಳದಲ್ಲಿ ಅಭದ್ರತೆ ಕಾರಣದಿಂದಾಗಿ ಕೆಲಸಕ್ಕೆ ಸೇರುವ ಮಹಿಳಾ ಕಾರ್ಮಿಕರ ಸಂಖ್ಯೆ ಕಡಿಮೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಅಭಿಪ್ರಾಯಪಟ್ಟರು.

‘ವುಮೆನ್, ವರ್ಕ್ ಆ್ಯಂಡ್ ಲೀಡರ್ಶಿಪ್: ಒನ್ ಟು ಒನ್ ಕನ್ವರ್ಸೇಷನ್’ ಎಂಬ ವಿಷಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉದ್ಯೋಗ ಸ್ಥಳಕ್ಕೆ ಅಥವಾ ಶಾಲೆಗೆ ಹೋಗಬೇಕು ಎಂದರೂ ಮಹಿಳೆಯರಲ್ಲಿ ಅಭದ್ರತೆ ಭಾವನೆ ಕಾಡುತ್ತದೆ’ ಎಂದು ವಿಶ್ಲೇಷಿಸಿದರು.

‘ಮಹಿಳೆಯರಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಸಾಮಾಜಿಕ, ಆರ್ಥಿಕ ಕಾರಣಗಳಿಂದಾಗಿಯೂ ಮಹಿಳೆಯರ ಪಾಲಿಗೆ ಅವಕಾಶಗಳು ಸೀಮಿತವಾಗುತ್ತವೆ ಎಂಬುದು ಡಿಲೊಯಿಟ್ ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ’ ಎಂದು ವಿವರಿಸಿದರು.

ಅಂಕಿ–ಅಂಶ
ಶೇ 36.7:2005 ರಲ್ಲಿದ್ದ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಪ್ರಮಾಣ
ಶೇ 26:2018 ರಲ್ಲಿದ್ದ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಪ್ರಮಾಣ

ಇದು ಪರಿಹರಿಸಲಾಗದಂತಹ ಸಮಸ್ಯೆಯೇನೂ ಅಲ್ಲ. ಮಹಿಳೆಯರಲ್ಲಿ ಭದ್ರತೆಯ ಭಾವನೆ ಮೂಡುವಂತಹ ವಾತಾವರಣ ಸೃಷ್ಟಿಸುವ ಬದ್ಧತೆ ಅಗತ್ಯ.
-ಕ್ರಿಸ್ಟಲಿನಾ ಜಾರ್ಜೀವಾ,ವ್ಯವಸ್ಥಾಪಕ ನಿರ್ದೇಶಕಿ, ಐಎಂಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.