ವಾಷಿಂಗ್ಟನ್: ಅಮೆರಿಕದ ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ಜನವರಿ 6ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೆನೆಟ್ ವಾಗ್ದಂಡನೆಯಿಂದ ಖುಲಾಸೆ ಮಾಡಿರಬಹುದು. ಆದರೆ ಇದು ಅಂತಿಮವಲ್ಲ. ಟ್ರಂಪ್ ವಿರುದ್ಧನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯೂ ಇದೆ ಎಂದು ನಾಯಕರೊಬ್ಬರು ಹೇಳಿದರು.

ಟ್ರಂಪ್ ಅವರು ಅಧ್ಯಕ್ಷರಾಗಿದ್ದಾಗ ಅವರಿಗೆ ಕಾನೂನಾತ್ಮಕ ರಕ್ಷಣೆ ಸಿಕ್ಕಿತ್ತು. ಆದರೆ ಈಗ ಸಾಮಾನ್ಯ ಪ್ರಜೆಯಾಗಿರುವ ಟ್ರಂಪ್ ಅವರಿಗೆ ಆ ಸೌಲಭ್ಯವಿಲ್ಲ. ಹಾಗಾಗಿ ಟ್ರಂಪ್ ಅವರನ್ನು ವಾಗ್ದಂಡನೆಯಿಂದ ಖುಲಾಸೆ ಮಾಡಿದರೂ, ಅವರನ್ನು ನ್ಯಾಯಾಲಯಕ್ಕೆ ಕರೆಯಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ.

‘ತಾವು ಅಧಿಕಾರದಲ್ಲಿದ್ದಾಗ ಮಾಡಿದ ಕಾರ್ಯಗಳಿಗೆ ಟ್ರಂಪ್ ಈಗಲೂ ಹೊಣೆಗಾರರಾಗಿದ್ದಾರೆ. ಕ್ಯಾಪಿಟಲ್ ಹಿಲ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸೆನೆಟ್‌ನಲ್ಲಿ ವಿಚಾರಣೆ ನಡೆಸುವುದಕ್ಕಿಂತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದು ಸರಿಯಾಗಿದೆ’ ಎಂದು ಸೆನೆಟ್‌ನ ಅಲ್ಪಸಂಖ್ಯಾತರ ನಾಯಕ ಮಿಚ್ ಮೆಕಾನಲ್ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.