ವಾಷಿಂಗ್ಟನ್ (ಪಿಟಿಐ): ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚ್ಚೈ ಅವರು ಇಲ್ಲಿನ ಭಾರತದ ರಾಯಭಾರ ಕಚೇರಿಗೆ ಕಳೆದ ವಾರ ಭೇಟಿ ನೀಡಿದ್ದು, ಡಿಜಿಟಲೀಕರಣ ಸೇರಿದಂತೆ ಭಾರತದಲ್ಲಿ ಕಂಪನಿಯ ವಿವಿಧ ಕಾರ್ಯಚಟುವಟಿಕೆ ಕುರಿತು ಚರ್ಚಿಸಿದರು.

ಈ ಕುರಿತು ಈಗ ಮಾಡಿರುವ ಟ್ವೀಟ್ನಲ್ಲಿ ಪಿಚ್ಚೈ, ‘ಚರ್ಚೆ ಅವಕಾಶ ಕುರಿತಂತೆ ಭಾರತದ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಅವರಿಗೆ ಕೃತಜ್ಞತೆ ಸಲ್ಲಿಸಿದ್ದು, ಭಾರತದಲ್ಲಿ ಡಿಜಿಟಲ್ ಚಟುವಟಿಕೆ ವಿಸ್ತರಣೆ ಮತ್ತು ಡಿಜಿಟಲ್ ಕ್ಷೇತ್ರದ ಭವಿಷ್ಯ ಕುರಿತು ಗೂಗಲ್ ಬದ್ಧವಿದೆ’ ಎಂದಿದ್ದಾರೆ.

ಇದೇ ವರ್ಷದ ಜನವರಿಯಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ 17 ಜನರಲ್ಲಿ ಪಿಚ್ಚೈ ಅವರೂ ಸೇರಿದ್ದರು. ‘ಪರಿವರ್ತನೆಗಾಗಿ ತಂತ್ರಜ್ಞಾನ –ಅನುಷ್ಠಾನಕ್ಕಾಗಿ ಚಿಂತನೆ’ ಎಂದು ಇದಕ್ಕೆ ಪ್ರತಿಯಾಗಿ ರಾಯಭಾರಿ ಸಂಧು ಅವರು ಟ್ವೀಟ್ ಮಾಡಿದ್ದಾರೆ.

ರಾಯಭಾರ ಕಚೇರಿಯಲ್ಲಿ ಸುಂದರ್ ಪಿಚ್ಚೈ ಅವರನ್ನು ಭೇಟಿಯಾಗಲು ಖುಷಿಯಾಗಿದೆ. ಗೂಗಲ್ ಜೊತೆಗೂಡಿ ಭಾರತ–ಅಮೆರಿಕ ನಡುವಣ ವಾಣಿಜ್ಯ ಚಟುವಟಿಕೆ ವಿಸ್ತರಣೆ, ತಂತ್ರಜ್ಞಾನ ಪಾಲುದಾರಿಕೆ ಕುರಿತು ಚರ್ಚಿಸಲಾಯಿತು ಎಂದು ಹೇಳಿದ್ದಾರೆ.

ಪಿಚ್ಚೈ ಅವರು ಸಿಇಒ ಆದ ಬಳಿಕ ಗೂಗಲ್ ಸಂಸ್ಥೆಯು ಭಾರತದಲ್ಲಿ ಯುವಪೀಳಿಗೆಗೆ ತರಬೇತಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಭಾರತ ಡಿಜಿಟಲೀಕರಣಕ್ಕಾಗಿ ಗೂಗಲ್ ಕಾರ್ಯಕ್ರಮದಡಿ 10 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿಯೂ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.