ಬೀಜಿಂಗ್ : ಇದೇ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ಜುಲೈ 4ರಂದು ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಸಮಾವೇಶ ನಡೆಯಲಿದ್ದು, ಇಲ್ಲಿನ ಕೇಂದ್ರ ಕಚೇರಿಯಲ್ಲಿ ನಿರ್ಮಿಸಲಾಗಿರುವ ಸುಂದರ ವಿನ್ಯಾಸದ ‘ನವದೆಹಲಿ ಸಭಾಂಗಣ’ವನ್ನು ಮಂಗಳವಾರ ಉದ್ಘಾಟಿಸಲಾಯಿತು.

ಈ ವೇಳೆ ವಿಡಿಯೊ ಮೂಲಕ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು, ‘ಎಸ್‌ಸಿಒ ಪ್ರಧಾನ ಕಾರ್ಯದರ್ಶಿ, ಮತ್ತಿತರ ಗಣ್ಯರ ಸಮ್ಮುಖದಲ್ಲಿ ಸಭಾಂಗಣ ಉದ್ಘಾಟಿಸಿರುವುದು ಸಂತಸ ತಂದಿದೆ. ಇದು ಭಾರತದ ವೈವಿದ್ಯಮಯ ಸಂಸ್ಕೃತಿಯನ್ನು ಅನಾವರಣಗೊಳಿಸಲಿದೆ. ಈ ಸಭಾಂಗಣವು ‘ಪುಟ್ಟ ಭಾರತ’ವಾಗಿರಲಿದೆ’ ಎಂದು ಬಣ್ಣಿಸಿದರು.

‘ಇದು ಸಾಂಪ್ರದಾಯಿಕ ವಿನ್ಯಾಸದ ಜೊತೆ ಆಧುನಿಕ ತಂತ್ರಜ್ಞಾನ, ಸಾಧನಗಳನ್ನೂ ಒಳಗೊಂಡಿದೆ. ‘ವಸುಧೈವ ಕುಟುಂಬಕಂ ’ (ವಿಶ್ವವೇ ಕುಟುಂಬ) ಎಂಬ ಭಾರತದ ಬದ್ಧತೆಗೆ ಸಾಕ್ಷಿಯಾಗಲಿದೆ’ ಎಂದು ತಿಳಿಸಿದರು.

ಭಾರತ, ಚೀನಾ, ಪಾಕಿಸ್ತಾನ, ರಷ್ಯಾ, ಕಜಕಸ್ತಾನ, ತಜಿಕಿಸ್ತಾನ, ಉರ್ಬೆಕಿಸ್ತಾನ, ಕಿರ್ಗಿಸ್ತಾನ ಎಸ್‌ಸಿಒ ಸದಸ್ಯ ರಾಷ್ಟ್ರಗಳಾಗಿವೆ. ಈ ಪೈಕಿ ಆರು ದೇಶಗಳು ಈಗಾಗಲೇ ಸಭಾಂಗಣವನ್ನು ಹೊಂದಿದ್ದವು. ಪಾಕಿಸ್ತಾನ ಸಹ ಶೀಘ್ರ ತನ್ನದೇ ಸಭಾಂಗಣ ನಿರ್ಮಾಣಕ್ಕೆ ಮುಂದಾಗಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.