ಬೀಜಿಂಗ್ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಪ್ರಾತಿನಿಧ್ಯ ನೀಡಬೇಕೆಂದು ಪ್ರತಿಪಾದಿಸಿರುವ ಚೀನಾವು, ಭಾರತಕ್ಕೆ ಕಾಯಂ ಸದಸ್ಯತ್ವ ನೀಡುವ ಬಗ್ಗೆ ತನ್ನ ಮೌನವನ್ನು ಮುಂದುವರಿಸಿದೆ.

ಭದ್ರತಾ ಮಂಡಳಿಯ ಸುಧಾರಣೆಗೆ ಸಂಬಂಧಿಸಿದಂತೆ ಚೀನಾ ವಿದೇಶಾಂಗ ವ್ಯವಹಾರ ಆಯೋಗದ ಕಚೇರಿಯ ನಿರ್ದೇಶಕ ವಾಂಗ್ ಯಿ ನೇತೃತ್ವದ ಸಮಿತಿಯು ಶನಿವಾರ ಇಲ್ಲಿ ಯುಎನ್‌ಎಸ್‌ಸಿ ತಂಡದ ಮುಖ್ಯಸ್ಥರನ್ನು ಭೇಟಿಯಾಗಿ ತನ್ನ ಅಭಿಪ್ರಾಯ ತಿಳಿಸಿದೆ.

ಭದ್ರತಾ ಮಂಡಳಿಯಲ್ಲಿ ವಿಟೊ ಅಧಿಕಾರ ಹೊಂದಿರುವ ಐದು ರಾಷ್ಟ್ರಗಳ ಪೈಕಿ ಚೀನಾವೂ ಒಂದಾಗಿದೆ. ಭಾರತ ಕೂಡ ವಿಟೊ ಅಧಿಕಾರಕ್ಕೆ ಪ್ರಯತ್ನಿಸುತ್ತಿದೆ. ಈ ನಡುವೆಯೇ ಚೀನಾವು, ‘ಭದ್ರತಾ ಮಂಡಳಿಯಲ್ಲಿ ಅಭಿವೃದ್ಧಿಶೀಲ ಸಣ್ಣ ಮತ್ತು ಮಧ್ಯಮ ರಾಷ್ಟ್ರಗಳಿಗೆ ಪ್ರಾತಿನಿಧ್ಯ ನೀಡಬೇಕು’ ಎಂದು ಪ್ರತಿಪಾದಿಸಿದೆ.

ಆದರೆ, ಭಾರತವನ್ನು ಯುಎನ್‌ಎಸ್‌ಸಿ ಸೇರ್ಪಡೆಗೊಳಿಸಬೇಕೆಂಬ ಒತ್ತಾಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.