ಪೋರ್ಟ್ ಲೂಯಿಸ್(ಮಾರಿಷಿಯಸ್): ಚಾಗೋಸ್ ದ್ವೀಪಸಮೂಹಕ್ಕೆ ಸಂಬಂಧಿಸಿದ ಸಮಸ್ಯೆ ವಿಚಾರವಾಗಿ ಮಾರಿಷಿಯಸ್ಗೆ ತಾನು ನೀಡಿರುವ ಬೆಂಬಲ ಅಚಲವಾದುದು ಎಂದು ಭಾರತ ಮಂಗಳವಾರ ಹೇಳಿದೆ.

ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಮಾರಿಷಿಯಸ್ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ಭಾರತದ ಈ ನಿಲುವನ್ನು ದ್ವೀಪ ರಾಷ್ಟ್ರಕ್ಕೆ ತಿಳಿಸಿದರು.

ಪ್ರಧಾನಿ ಪ್ರವಿಂದಕುಮರ್ ಜುಗ್ನಾಥ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಈ ಕುರಿತು ಮಾತನಾಡಿದ ಜೈಶಂಕರ್, ‘ಮಾರಿಷಿಯಸ್ನೊಂದಿಗೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರತ ಎದುರು ನೋಡುತ್ತದೆ. ಚಾಗೋಸ್ ದ್ವೀಪಸಮೂಹ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಾರಿಷಿಯಸ್ಗೆ ನೀಡಿರುವ ಬೆಂಬಲವನ್ನು ಭಾರತ ಮುಂದುವರಿಸಲಿದೆ’ ಎಂದರು.

ಭಾರತದ ಈ ನಿಲುವಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಮನೀಷ್ ಗಾಬಿನ್, ‘ಮಾರಿಷಿಯಸ್ಗೆ ಭಾರತ ನೀಡಿರುವ ಬೆಂಬಲವನ್ನು ಮುಂದುವರಿಸುವುದಾಗಿ ಮತ್ತೊಮ್ಮೆ ದೃಢಪಡಿಸಿರುವ ಜೈಶಂಕರ್ ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.