ವಿಶ್ವಸಂಸ್ಥೆ: ಮಕ್ಕಳ ರಕ್ಷಣೆ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು ಮಕ್ಕಳ ಮೇಲಿನ ಶಸ್ತ್ರಾಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಿಂದ ಭಾರತವನ್ನು ಕೈಬಿಟ್ಟಿದ್ದಾರೆ.

ಮಕ್ಕಳ ರಕ್ಷಣೆ ಕುರಿತಂತೆ ಭಾರತ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಕಳೆದ ವರ್ಷದ ವರದಿಯಲ್ಲಿ ಶ್ಲಾಘಿಸಿದ್ದ ಗುಟೆರಸ್, ಈ ಕ್ರಮಗಳು ಆತಂಕದ ಸನ್ನಿವೇಶಗಳಿಂದ ಭಾರತವನ್ನು ಮುಕ್ತವಾಗಿಸಲು ನೆರವಾಗಬಹುದು ಎಂದಿದ್ದರು.

'ಮಕ್ಕಳ ಉತ್ತಮ ಸುರಕ್ಷತೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿ, ಭಾರತವನ್ನು ವಾರ್ಷಿಕ ವರದಿಯಿಂದ ಕೈಬಿಡಲಾಗಿದೆ' ಎಂದು ಗುಟೆರಸ್ ಅವರು ಮಕ್ಕಳು ಮತ್ತು ಶಸ್ತ್ರಾಸ್ತ್ರ ಸಂಘರ್ಷ ಕುರಿತ 2023ರ ವಾರ್ಷಿಕ ವರದಿಯಲ್ಲಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಸಲುವಾಗಿ ಸರ್ಕಾರವು ಕಳೆದ ನವೆಂಬರ್‌ನಲ್ಲಿ ವಿಶ್ವಸಂಸ್ಥೆಯ ಭಾಗವಹಿಸುವಿಕೆಯೊಂದಿಗೆ ಆಯೋಜಿಸಿದ್ದ ಕಾರ್ಯಾಗಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.