ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್–ಹಿಜ್ಬುಲ್ಲಾ ನಡುವೆ ಉದ್ವಿಗ್ನತೆ: ಲೆಬನಾನ್ ತೊರೆಯಲು ಭಾರತೀಯರಿಗೆ ಸಲಹೆ

Published : 1 ಆಗಸ್ಟ್ 2024, 14:37 IST
Last Updated : 1 ಆಗಸ್ಟ್ 2024, 14:37 IST
ಫಾಲೋ ಮಾಡಿ
Comments

ದುಬೈ: ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಉದ್ವಿಗ್ನ ಪರಿಸ್ಥಿತಿ ಉಲ್ಬಣಿಸುತ್ತಿರುವುದರಿಂದ ಮುಂದಿನ ಸೂಚನೆ ನೀಡುವವರೆಗೆ ಭಾರತೀಯರು ಲೆಬನಾನ್‌ಗೆ ಪ್ರಯಾಣಿಸುವಂತಿಲ್ಲ ಎಂದು ಬೈರೂತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಗುರುವಾರ ಭಾರತೀಯರಿಗೆ ಸಲಹೆ ನೀಡಿದೆ.

ಲೆಬನಾನ್‌ನಲ್ಲಿ ಇರುವ ಭಾರತೀಯರಿಗೆ ಆ ದೇಶ ತೊರೆಯುವಂತೆಯೂ ಸೂಚನೆ ಕೊಟ್ಟಿದೆ.  

ಮಂಗಳವಾರ ಇಸ್ರೇಲ್, ದಕ್ಷಿಣ ಬೈರೂತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತ ಮಿಲಿಟರಿ ಕಮಾಂಡರ್ ಫೌದ್ ಶೂಕೂರ್ ಎಂಬಾತನನ್ನು ಕೊಂದಿರುವುದಾಗಿ ದೃಢಪಡಿಸಿತು.

ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನಲ್ಲಿ ವಾರದ ಹಿಂದೆ ಫೌದ್ ಶೂಕೂರ್ ರಾಕೆಟ್ ದಾಳಿ ನಡೆಸಿ, 12 ಯುವಕರನ್ನು ಹತ್ಯೆ ಮಾಡಿದ್ದ.

ಈ ಪ್ರದೇಶದಲ್ಲಿ ಇತ್ತೀಚಿನ ಬೆಳವಣಿಗೆ ಮತ್ತು ಸಂಭಾವ್ಯ ಬೆದರಿಕೆಗಳನ್ನು ಗಮನಿಸಿ, ಬೈರೂತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಸಲಹೆಯನ್ನು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದೆ.

ಕಳೆದ ವರ್ಷ, ಅಕ್ಟೋಬರ್‌ 8ರಿಂದ ಇಸ್ರೇಲ್–ಹಿಜ್ಬುಲ್ಲಾ ಗಡಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT