ದುಬೈ: ಭಾರತೀಯನೊಬ್ಬನಿಗೆ ದುಬೈನಲ್ಲಿ ₹2.25 ಕೋಟಿ ಮೊತ್ತದ ನಗದು ಬಹುಮಾನ ಗಳಿಸಿದ್ದು, ಅದು ಆತನ ವರ್ಷಗಳ ಉಳಿತಾಯ ಮತ್ತು ಬುದ್ಧಿವಂತಿಕೆಯ ಹೂಡಿಕೆಗೆ ಸಿಕ್ಕ ಪ್ರತಿಫಲ ಎಂದು ಸ್ಥಳೀಯ ಪತ್ರಿಕೆಯೊಂದು ಮಂಗಳವಾರ ವರದಿ ಮಾಡಿದೆ.

ನಾಗೇಂದ್ರಂ ಬೋರುಗಡ್ಡ ಎನ್ನುವ ಆಂಧ್ರಪ್ರದೇಶ ಮೂಲದ ವ್ಯಕ್ತಿ 2019ರಿಂದ ನೇರ ಕಡಿತದ ಮೂಲಕ ಸುಮಾರು ₹2270 ರಾಷ್ಟ್ರೀಯ ಬಾಂಡ್ಗಳಲ್ಲಿ ತೊಡಗಿಸುತ್ತಿದ್ದರು. 2017ರಿಂದ ದುಬೈನಲ್ಲಿ ವಾಸವಾಗಿರುವ ಅವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

‘ನಾನು ನನ್ನ ಕುಟುಂಬದ ಉತ್ತಮ ಭವಿಷ್ಯಕ್ಕಾಗಿ ಮತ್ತು ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ದುಬೈಗೆ ಬಂದಿದ್ದೇನೆ. ನಗದು ಬಹುಮಾನ ಸಿಕ್ಕಿರುವುದನ್ನು ನಂಬಲಾಗುತ್ತಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.