ದುಬೈ: ಕೊರೊನಾ ಸೋಂಕಿಗೆ ತುತ್ತಾಗಿದ್ದ ನಾಲ್ಕು ವರ್ಷದ ಭಾರತೀಯ ಮೂಲದ ಬಾಲಕಿ, ರೋಗ ನಿರೋಧಕ ಶಕ್ತಿಯ ಕೊರತೆಯ ನಡುವೆಯೂ ಗುಣಮುಖವಾಗಿ ಅಚ್ಚರಿ ಮೂಡಿಸಿದ್ದಾಳೆ.

ಬಾಲಕಿ ಶಿವಾನಿ ಇತ್ತೀಚೆಗಷ್ಟೇ ಕ್ಯಾನ್ಸರ್ನಿಂದ ಚೇತರಿಸಿಕೊಂಡಿದ್ದಳು.ಶಿವಾನಿಯ ತಾಯಿಆರೋಗ್ಯ ಕಾರ್ಯಕರ್ತೆ. ತಾಯಿಯಿಂದ ಶಿವಾನಿ ಮತ್ತು ಆಕೆಯ ತಂದೆಗೆ ಸೋಂಕು ತಗುಲಿತ್ತು. ಆದರೆ, ಇವರಿಬ್ಬರಲ್ಲೂ ರೋಗ ಲಕ್ಷಣಗಳು ಇರಲಿಲ್ಲ.ಸೋಂಕು ದೃಢಪಟ್ಟ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಶಿವಾನಿ ಕಳೆದ ವರ್ಷ ಕಿಮೋಥೆರಪಿಗೆ ಒಳಗಾಗಿದ್ದಳು. ಇದರಿಂದ ಆಕೆಯ ರೋಗ ನಿರೋಧಕ ಶಕ್ತಿ ದುರ್ಬಲವಾಗಿತ್ತು. ಹಾಗಾಗಿ, ಆಕೆಯ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ಆದರೆ, ಯಾವುದೇ ತೊಂದರೆಯಿಲ್ಲದೇ ಚೇತರಿಸಿಕೊಂಡಿದ್ದಾಳೆ’ ಎಂದು ವೈದ್ಯರು ತಿಳಿಸಿದ್ದಾರೆ.

ಶಿವಾನಿ, ಯುಎಇಯಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಅತಿ ಸಣ್ಣ ವಯಸ್ಸಿನವಳು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.