ವಾಷಿಂಗ್ಟನ್: ಭಾರತ ನಡೆಸಿರುವ ಉಪಗ್ರಹ ನಾಶದಿಂದ ಅಂತರಿಕ್ಷದಲ್ಲಿ 400 ಚೂರು ತ್ಯಾಜ್ಯ ಸೃಷ್ಟಿಯಾಗಿದೆ. ಇದರಿಂದಾಗಿ ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣ(ಅಂಬಾನಿ)ದತ್ತ ಸಾಗುವ ಗಗನಯಾತ್ರಿಗಳಿಗೆ ಹೊಸ ಅಪಾಯ ಎದುರಾದಂತಾಗಿದೆ ಎಂದು ನಾಸಾ ಮಂಗಳವಾರ ಹೇಳಿದೆ.

ಕೆಳಗಿನ ಕಕ್ಷೆಯಲ್ಲಿದ್ದ ತನ್ನದೇ ಉಪಗ್ರಹವನ್ನು ಭಾರತ ಕ್ಷಿಪಣಿ ಬಳಸಿ ನಾಶಪಡಿಸಿದ ಐದು ದಿನಗಳ ಬಳಿಕ ನಾಸಾ ಆಡಳಿತ ಮುಖ್ಯಸ್ಥ ಜಿಮ್ ಬ್ರಿಡೆನ್ಸ್ಟೈನ್ ಅಲ್ಲಿನ ಸಿಬ್ಬಂದಿ ಉದ್ದೇಶಿ ಮಾತನಾಡಿದ್ದಾರೆ. ಉಪಗ್ರಹ ನಿಗ್ರಹಕ್ಷಿಪಣಿ ಪರೀಕ್ಷೆಯ ಮೂಲಕ ಭಾರತ ಜಗತ್ತಿನಲ್ಲಿ ಅತ್ಯಾಧುನಿಕ ಗಗನಶಕ್ತಿ ಹೊಂದಿರುವ ರಾಷ್ಟ್ರಗಳಲ್ಲಿ ತನ್ನ ಸ್ಥಾನ ಖಚಿತಪಡಿಸಿತ್ತು.

ಇದನ್ನೂ ಓದಿ:ಉಪಗ್ರಹಕ್ಕೆ ಕ್ಷಿಪಣಿ: ಭಾರತವೀಗ ವಿಶ್ವದ ‘ಸ್ಪೇಸ್ ಸೂಪರ್ ಪವರ್’

‘ಉಪಗ್ರಹದ ಎಲ್ಲ ತುಂಡುಗಳನ್ನೂ ಪತ್ತೆ ಮಾಡುವಷ್ಟು ದೊಡ್ಡದಾಗಿಲ್ಲ. ಪ್ರಸ್ತುತ 10 ಸೆಂ.ಮೀ ಅಥವಾ ಅದಕ್ಕಿಂತಲೂ ದೊಡ್ಡದಾದ, ಸುಮಾರು 60 ಚೂರುಗಳನ್ನು ಪತ್ತೆ ಮಾಡಲಾಗಿದೆ’ ಎಂದು ಜಿಮ್ ಹೇಳಿದ್ದಾರೆ.

ಭಾರತ ನಾಶ ಪಡಿಸಿರುವ ಉಪಗ್ರಹ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಅಂಬಾನಿ)ದಿಂದ ಹಾಗೂ ಬಹುತೇಕ ಉಪಗ್ರಹಗಳು ಸುತ್ತುತ್ತಿರುವ ಕಕ್ಷೆಗಿಂತಲೂ ಕೆಳ ಮಟ್ಟದಲ್ಲಿ, ಅಂದರೆ ಭೂಮಿಯಿಂದ 300 ಕಿ.ಮೀ. ಎತ್ತರದಲ್ಲಿತ್ತು.

ಇದನ್ನೂ ಓದಿ: 2012ರಲ್ಲಿಯೇ ಭಾರತಕ್ಕೆ ಉಪಗ್ರಹ ನಿಗ್ರಹ ಕ್ಷಿಪಣಿ ತಂತ್ರಜ್ಞಾನ ಸಿದ್ಧಿಸಿತ್ತು !

’ಆದರೆ, ಸುಮಾರು 24 ಚೂರುಗಳು ಅಂಬಾನಿಗಿಂತಲೂ ಎತ್ತರದ ಮಟ್ಟಕ್ಕೆ ಸಾಗಿವೆ. ಅಂಬಾನಿಗಿಂತಲೂ ಮೇಲಕ್ಕೆ ತ್ಯಾಜ್ಯ ರವಾನಿಸಬಹುದಾದ ಕಾರ್ಯಕ್ರಮವನ್ನು ಸೃಷ್ಟಿಸುವುದು ಅತ್ಯಂತ ಕೆಟ್ಟ ಸಂಗತಿ. ಅಂತರಿಕ್ಷದಲ್ಲಿ ಅಂಥ ಚಟುವಟಿಕೆಗಳಿಂದ ಭವಿಷ್ಯದಲ್ಲಿ ಮನುಷ್ಯರ ಗಗನಯಾತ್ರೆಗೆ ಉಚಿವಾದುದಲ್ಲ’ ಎಂದಿದ್ದಾರೆ.

ಉಪಗ್ರಹಗಳು ಹಾಗೂ ಅಂಬಾನಿಗೆ ಅಂತರಿಕ್ಷದಲ್ಲಿ ವಸ್ತುಗಳು ಡಿಕ್ಕಿಯಾಗದಂತೆ ತಡೆಯಲು ಅಮೆರಿಕ ಸೇನೆ ಗಮನ ಹರಿಸುತ್ತಿದೆ. ಈವರೆಗೂ ಸೇನೆ 10 ಸೆಂ.ಮೀ.ಗಿಂತಲೂ ದೊಡ್ಡದಾದ ಸುಮಾರು 23,000 ವಸ್ತುಗಳು ಪತ್ತೆ ಮಾಡಿದೆ. ಇವುಗಳಲ್ಲಿ ಅಂತರಿಕ್ಷ ತ್ಯಾಜ್ಯದ ಪಾಲು 10,000 ಚೂರುಗಳು. ಭೂಮಿಯಿಂದ 530 ಮೈಲಿ ದೂರದಲ್ಲಿ ಚೀನಾ 2007ರಲ್ಲಿ ಕೈಗೊಂಡ ಉಪಗ್ರಹ ನಿಗ್ರಹ ಪರೀಕ್ಷೆಯಿಂದ 3,000 ಚೂರು ತ್ಯಾಜ್ಯ ಸೃಷ್ಟಿಯಾಗಿತ್ತು. ಒಂದೇ ಚಟುವಟಿಕೆಯಿಂದ ದೊಡ್ಡ ಮಟ್ಟದಲ್ಲಿ ತ್ಯಾಜ್ಯ ಅಂತರಿಕ್ಷದ ವಿಸ್ತಾರವನ್ನು ಸೇರಿತ್ತು.

ಇದನ್ನೂ ಓದಿ: ‘ಉಪಗ್ರಹ ನಿರೋಧಕ ಕ್ಷಿಪಣಿ’ ರಾಜಕೀಯಕ್ಕೆ ಬಳಕೆ

ಭಾರತದ ನಡೆಸಿರುವ ಪರೀಕ್ಷೆಯಿಂದ ಕಳೆದ 10 ದಿನಗಳಲ್ಲಿ ಅಂಬಾನಿಗೆ ಎದುರಾಗುವ ಅಪಾಯದ ಪ್ರಮಾಣ ಶೇ 44ರಷ್ಟು ಹೆಚ್ಚಿದೆ. ಆದರೆ, ತ್ಯಾಜ್ಯ ವಾತಾವರಣ ವಲಯವನ್ನು ಪ್ರವೇಶಿಸುತ್ತಿದ್ದಂತೆ ಸುಡುವ ಪ್ರಕ್ರಿಯೆಯಿಂದಾಗಿ ಅಪಾಯದ ಪ್ರಮಾಣ ಕಡಿಮೆಯಾಗುತ್ತದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.