ವಾಷಿಂಗ್ಟನ್: ಬಾಲಕಿಯರಿಗೆ ಅಕ್ರಮ ಲೈಂಗಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಪ್ರೇರಿಪಿಸುತ್ತಿದ್ದ ಆರೋಪ ಸಾಬೀತಾಗಿದ್ದರಿಂದ ಭಾರತ ಮೂಲದ ವಿದ್ಯಾರ್ಥಿಯೊಬ್ಬನಿಗೆ ಅಮೆರಿಕದ ಫೆಡರಲ್ ನ್ಯಾಯಾಲಯ 12 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅಪರಾಧಿಯನ್ನು ಅಮೆರಿಕದಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ನೆಲೆಸಿದ್ದ ಉಪೇಂದ್ರ ಆಡೂರು (32) ಎಂದು ಗುರುತಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳ ಮುಖಾಂತರ ನಿಷೇಧಿತ ಚಟುವಟಿಕೆಗಳನ್ನು ನಡೆಸುತ್ತಿದ್ದ ಶಂಕೆಯ ಮೇಲೆ ಪತ್ತೆದಾರಿ ಪೊಲೀಸರು 2022ರ ಸೆಪ್ಟೆಂಬರ್ನಿಂದ ಅಕ್ಟೋಬರ್ವರೆಗೆ ಉಪೇಂದ್ರ ಮೇಲೆ ನಿಗಾ ಇಟ್ಟಿದ್ದರು. ಈ ವೇಳೆ ನಕಲಿ ಖಾತೆ ತೆರೆದಿದ್ದ ಪೊಲೀಸರು ಅದರ ಮೂಲಕ ಉಪೇಂದ್ರನನ್ನು ಬಲೆಗೆ ಬೀಳಿಸಿದ್ದರು.

ಉಪೇಂದ್ರ ಬಾಲಕಿಯರನ್ನು ಗುರಿಯಾಗಿಸಿ ಅವರನ್ನು ಅಕ್ರಮ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರಿಪಿಸುವುದು ಹಾಗೂ ಪದೇ ಪದೇ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದ. ಈ ಕುರಿತು ಪ್ರಕರಣ ದಾಖಲಿಸಿ, ಆತನ ಮೊಬೈಲ್ ವಶಪಡಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು ಎಂದು ಫೆಡರಲ್ ನ್ಯಾಯಾಲಯದ ಅಟಾರ್ನಿಯವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.ನೀಲಿಚಿತ್ರಗಳ ತಾರೆ ಜೊತೆಗಿನ ಕೇಸ್: ಡೋನಾಲ್ಡ್ ಟ್ರಂಪ್ ತಪ್ಪಿತಸ್ಥ.ನಾಯಕತ್ವಕ್ಕೆ ಕಮಲಾ ಹ್ಯಾರಿಸ್ ಅಸಮರ್ಥ: ಚುನಾವಣಾ ಪ್ರಚಾರದ ವೇಳೆ ಟ್ರಂಪ್ ವಾಗ್ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.