ಮೆಲ್ಬರ್ನ್: ಭಾರತ, ಚೀನಾ ಮತ್ತು ಏಷ್ಯಾದ ಕೆಲ ದೇಶಗಳ ನಗರವಾಸಿಗಳು ಸಾರ್ವಜನಿಕ ಸಾರಿಗೆ ಬಳಸಲು ಅಷ್ಟಾಗಿ ಆಸಕ್ತಿ ಹೊಂದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ಭಾರತ, ಚೀನಾ, ಅಮೆರಿಕ, ನೆದರ್ ಲ್ಯಾಂಡ್, ಆಸ್ಟ್ರೇಲಿಯಾ ಸೇರಿದಂತೆ ಕೆಲ ದೇಶಗಳ ಪ್ರಯಾಣಿಕರನ್ನು ಸಂದರ್ಶಿಸಿ ಈ ಅಧ್ಯಯನ ನಡೆಸಿದ್ದಾರೆ.

ನಗರದ ಜನರ ಈ ತಾತ್ಸಾರದ ಮನೋಭಾವವನ್ನು ಬದಲಿಸುವ ನಿಟ್ಟಿನಲ್ಲಿನಗರ ಯೋಜನೆ ರೂಪಿಸು ವವರು ಕಾರ್ಯೋನ್ಮುಖರಾಗಬೇಕು ಎಂದು ಈ ಅಧ್ಯಯನ ಆಗ್ರಹಿಸಿದೆ.

ಈ ಅಧ್ಯಯನದ ವರದಿಯು ‘ಜರ್ನಲ್ ಆಫ್ ಟ್ರಾನ್ಸ್‌ಪೋರ್ಟ್ ಜಿಯಾಗ್ರಫಿ’ಯಲ್ಲಿ ಪ್ರಕಟವಾಗಿದ್ದು, ‘ಭಾರತ ಮತ್ತು ಚೀನಾದ ಜನರು ಈ ನಿಟ್ಟಿನಲ್ಲಿ ನಕಾರಾತ್ಮಕ ಮನೋಭಾವ’ ಹೊಂದಿದ್ದಾರೆ ಎಂದು ಪ್ರತಿಪಾದಿಸಿದೆ.

‘ಆಂಗ್ಲೊ ಮತ್ತು ನಾರ್ಡಿಕ್ ದೇಶ ಗಳಲ್ಲಿನ ಬಹುತೇಕರುಶ್ರೀಮಂತರಾಗಿದ್ದು, ಹೆಚ್ಚು ಕಾರು ಹೊಂದುವುದನ್ನು ಪ್ರತಿಷ್ಠೆಯಾಗಿಸಿಕೊಂಡಿದ್ದಾರೆ’ ’ ಎಂದುಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕಿ ಡೊರಿನಾ ಪೊಜಾನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.