ಜಕಾರ್ತ(ಎ.ಪಿ): ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿನ ತೈಲ ದಾಸ್ತಾನು ಕೇಂದ್ರದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 19 ಮಂದಿ ಸತ್ತಿದ್ದು, ಮೂವರು ನಾಪತ್ತೆಯಾಗಿದ್ದಾರೆ.

ಹೆಚ್ಚು ಜನದಟ್ಟಣೆಯುಳ್ಳ ತನ್ಹಾ ಮೆರಹ್ ಪ್ರದೇಶದ ಪ್ಲುಮ್ಪಾಂಗ್ ತೈಲ ಸಂಗ್ರಹ ಕೇಂದ್ರದಲ್ಲಿ ಅವಘಡ ಸಂಭವಿಸಿದೆ. ನಾಪತ್ತೆ ಆದವರಿಗಾಗಿ ಶೋಧ ಮುಂದುವರಿದಿದೆ. ದೇಶದ ಶೇ 25ರಷ್ಟು ಇಂಧನಅ ಗತ್ಯವನ್ನು ಈ ಕೇಂದ್ರ ಪೂರೈಸುತ್ತದೆ.

260 ಮಂದಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಧ್ಯಕ್ಷ ಜೊಕೊ ವಿಡೊಡೊ ಅವರು ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು. ಈ ಡಿಪೊದಲ್ಲಿ 2014ರಲ್ಲಿಯೂ ಅವಘಡ ಸಂಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.