ಜಕಾರ್ತ: ಇಂಡೊನೇಷ್ಯಾ ರಾಜಧಾನಿಯಿಂದ ಪಾಂಗ್‌ಕಲ್ ಪಿನಾಗ್ ದ್ವೀಪಕ್ಕೆ ಹೊರಟಿದ್ದ ‘ಲಯನ್ ಏರ್’ ವಿಮಾನ ಸೋಮವಾರ ಬೆಳಿಗ್ಗೆ 7.30ರ ಸುಮಾರಿಗೆ ಸಮುದ್ರಕ್ಕೆ ಪತನಗೊಂಡಿದೆ.

ವಿಮಾನ ಪತನಗೊಂಡಿರುವುದನ್ನುಇಂಡೊನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಏಜೆನ್ಸಿ ಖಚಿತಪಡಿಸಿದೆ.

ಜಕಾರ್ತದಿಂದ ಹೊರಟ 13 ನಿಮಿಷಗಳ ಬಳಿಕ ವಿಮಾನ ಸಂಪರ್ಕ ಕಡಿದುಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 7.30ರ ವೇಳೆಗೆ ಸುಮಾತ್ರಾದ ದ್ವೀಪದಲ್ಲಿ ಇಳಿಯಬೇಕಿದ್ದ ವಿಮಾನ ಸಮುದ್ರಕ್ಕೆ ಪತನಗೊಂಡಿರುವ ಶಂಕೆಯಿದೆ ಎಂದು ಬೆಳಿಗ್ಗೆ ಅಧಿಕಾರಿಗಳು ತಿಳಿಸಿದ್ದರು.

ವಿಮಾನ ಪತನಕ್ಕೆ ಕಾರಣವೇನೆಂದು ಈಗಲೇ ಹೇಳಲಾಗದು. ಬ್ಲ್ಯಾಕ್‌ಬಾಕ್ಸ್ ದೊರೆತ ಬಳಿಕವಷ್ಟೇ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ವಿಮಾನದಲ್ಲಿದ್ದವರ ಪೈಕಿ ಯಾರಾದರೂ ಬದುಕುಳಿದಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಯಾಣಿಕರಿಗಾಗಿ ನಾವು ಪ್ರಾರ್ಥನೆ ಮಾಡುತ್ತಿದ್ದೇವಲ್ಲದೆ, ಅವರು ಬದುಕಿರಲಿ ಎಂದು ಆಶಿಸುತ್ತೇವೆ’ ಎಂದುರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಏಜೆನ್ಸಿಯ ಮುಖ್ಯಸ್ಥ ಮುಹಮ್ಮದ್ ಸ್ಯೌಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.