ವಾಷಿಂಗ್ಟನ್ : ‘ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಸಂಚು ರೂಪಿಸಿದ್ದ ಇರಾನ್ನ ವ್ಯಕ್ತಿಯೇ ಶ್ರೀಲಂಕಾದಲ್ಲಿ ಇಸ್ರೇಲಿ ಪ್ರವಾಸಿಗರನ್ನೂ ಗುರಿಯಾಗಿಸಿ ಕಾರ್ಯತಂತ್ರ ರೂಪಿಸಿದ್ದ’ ಎಂದು ಅಮೆರಿಕದ ‘ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್‘ ಆರೋಪಿಸಿದೆ.

‘ಇರಾನ್ನ ಫರ್ಹಾದ್ ಶಾಕಿರಿ (51) ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ನ ಪರ ಕೆಲಸ ಮಾಡುತ್ತಾರೆ. ಇವರು ಇರಾನ್ನ ಟೆಹ್ರಾನ್ನಲ್ಲಿಯೇ ವಾಸಿಸುತ್ತಾರೆ’ ಎಂದು ಎಫ್ಡಿಐ ಶುಕ್ರವಾರ ಆರೋಪಿಸಿತ್ತು.

‘ಇಸ್ರೇಲ್ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿರುವ ಶ್ರೀಲಂಕಾದ ಅರುಗಮ್ ಬೀಚ್ನಲ್ಲಿ 2024ರ ಅಕ್ಟೋಬರ್ 23 ಅಥವಾ ಹತ್ತಿರ ಇನ್ನೊಂದು ದಿನದಲ್ಲಿ ದೊಡ್ಡ ಮಟ್ಟದ ಗುಂಡಿನ ದಾಳಿ ನಡೆಸಲು ಸಿದ್ಧತೆ ನಡೆದಿತ್ತು. ಅ. 28ರ ಹೊತ್ತಿಗೆ ಅಮೆರಿಕ ಹಾಗೂ ಇಸ್ರೇಲ್ ಸರ್ಕಾರಗಳು ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿತ್ತು’ ಎಂದು ಫೆಡೆರಲ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ ಆರೋಪಿಸಿದೆ.

‘ಅಮೆರಿಕ ಹಾಗೂ ಇಸ್ರೇಲ್ ಸರ್ಕಾರಗಳು ತಮ್ಮ ನಾಗರಿಕೆ ಎಚ್ಚರಿಕೆ ನೀಡಿದ ಬಳಿಕ, ಸಂಭವಿಸಬಹುದಾದ ದಾಳಿಯ ಕುರಿತು ಮಾಹಿತಿ ತಿಳಿದ ಶ್ರೀಲಂಕಾ, ಇರಾನ್ನ ಷಡ್ಯಂತರದ ಭಾಗವಾಗಿದ್ದ ತಂಡದಲ್ಲಿದ್ದ ದಾಳಿ ಪ್ರಕರಣದ ಎರಡನೇ ಆರೋಪಿಯನ್ನೂ ಸೇರಿ ಮೂವರನ್ನು ಬಂಧಿಸಿತ್ತು’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಎರಡನೇ ಆರೋಪಿಯಾಗಿರುವ ವ್ಯಕ್ತಿಯು ಹಾಗೂ ನಾನು ಈ ಹಿಂದೆ ಒಂದನೇ ಜೈಲಿನಲ್ಲಿದ್ದೆವು. ಗುಂಡಿನ ದಾಳಿ ನಡೆಸಿವ ಸಂಚು ರೂಪಿಸುವ ಮೊದಲು, ನಾನು ಆ ವ್ಯಕ್ತಿಗೆ ಶ್ರೀಲಂಕಾದಲ್ಲಿರುವ ಇಸ್ರೇಲ್ ದೂತಾವಾಸ ಕಚೇರಿಯ ಮೇಲೂ ನಿಗಾ ಇರಿಸುವಂತೆ ಹೇಳಿದ್ದೆ ಎಂದು ಶಾಕಿರಿ ಹೇಳಿದ್ದಾನೆ. ತಾನು ಸಂಗ್ರಹಿಸಿದ ಎಲ್ಲ ಮಾಹಿತಿಗಳನ್ನು ಇರಾನ್ನ ಗಾರ್ಡ್ ಅಧಿಕಾರಿಗಳಿಗೆ ರವಾನಿಸಿದ್ದಾಗಿಯೂ ಹೇಳಿದ್ದಾನೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.