ಇಸ್ಲಾಮಾಬಾದ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಮೂರು ದಿನಗಳ ಅಧಿಕೃತ ಭೇಟಿಗಾಗಿ ಸೋಮವಾರ ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ.

ಫೆಬ್ರುವರಿ 8ರಂದು ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ನಂತರ ಬೇರೆ ದೇಶದ ಮುಖ್ಯಸ್ಥರ ಮೊದಲ ಭೇಟಿ ಇದಾಗಿದೆ. ಗೃಹ ಸಚಿವ ಮಿಯಾನ್ ರಿಯಾಜ್ ಹುಸೇನ್ ಪಿರ್ಜಾದಾ ಮತ್ತು ಪಾಕಿಸ್ತಾನದಲ್ಲಿರುವ ಇರಾನ್ ರಾಯಭಾರಿ ಮುದಸ್ಸರ್ ಟಿಪ್ಪು ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ರೈಸಿ ಅವರನ್ನು ಸ್ವಾಗತಿಸಿದರು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯವು ತಿಳಿಸಿದೆ.

ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಶೆಹಬಾಜ್ ಷರೀಫ್, ಸೆನೆಟ್ ಅಧ್ಯಕ್ಷ ಯೂಸುಫ್ ರಜಾ ಗಿಲಾನಿ, ಸ್ಪೀಕರ್ ಅಯಾಜ್ ಸಾದಿಕ್ ಅವರನ್ನು ರೈಸಿ ಭೇಟಿ ಮಾಡಲಿದ್ದಾರೆ. ಜೊತೆಗೆ ಲಾಹೋರ್ ಮತ್ತು ಕರಾಚಿಗೆ ಭೇಟಿ ನೀಡುವುದಾಗಿಯೂ ವಿದೇಶಾಂಗ ಕಚೇರಿ ತಿಳಿಸಿದೆ.

ಪಾಕಿಸ್ತಾನ ಮತ್ತು ಇರಾನ್ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಿಸುವುದು ಮತ್ತು ವ್ಯಾಪಾರ, ಸಂಪರ್ಕ, ಇಂಧನ, ಕೃಷಿ ಮತ್ತು ಜನರೊಂದಿಗಿನ ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವುದು ಎರಡು ದೇಶಗಳ ನಡುವಿನ ಮುಖ್ಯ ಉದ್ದೇಶವಾಗಿದೆ ಎಂದು ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.