ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನ್‌ | ಶುಕ್ರವಾರದ ಪ್ರಾರ್ಥನೆಗೆ ಖಮೇನಿ ನೇತೃತ್ವ: ಭಾಷಣದ ಬಗ್ಗೆ ಕುತೂಹಲ

Published : 4 ಅಕ್ಟೋಬರ್ 2024, 4:05 IST
Last Updated : 4 ಅಕ್ಟೋಬರ್ 2024, 4:05 IST
ಫಾಲೋ ಮಾಡಿ
Comments

ಟೆಹ್ರಾನ್: ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಅವರು ಶುಕ್ರವಾರದ ಪ್ರಾರ್ಥನೆ ನೇತೃತ್ವ ನೀಡಲಿದ್ದು, ಬಳಿಕ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಭಾಷಣದಲ್ಲಿ ಇರಾನ್‌ನ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.

ಸುಮಾರು ಐದು ವರ್ಷಗಳ ಬಳಿಕ ಖಮೇನಿ ಅವರು ಶುಕ್ರವಾರದ ಪ್ರಾರ್ಥನೆಯ ನಾಯಕತ್ವ ವಹಿಸಲಿದ್ದಾರೆ. ಕೇಂದ್ರ ಟೆಹ್ರಾನ್‌ನಲ್ಲಿರುವ ಇಮಾನ್ ಖೋಮಿನಿ ಗ್ರ್ಯಾಂಡ್ ಮೊಸಲ್ಲಾ ಮಸೀದಿಯಲ್ಲಿ ಪ್ರಾರ್ಥನೆ ನಡೆಯಲಿದೆ ಎಂದು ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಈ ಹಿಂದೆ 2020ರ ಜನವರಿಯಲ್ಲಿ ಖಮೇನಿ ಶುಕ್ರವಾರದ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು. ಆಗ ಇಸ್ಲಾಮಿಕ್ ರೆವಲ್ಯೂಷರನರಿ ಗಾರ್ಡ್ಸ್‌ ಕಮಾಂಡರ್ ಖಾಸಿಂ ಸುಲೈಮಾನ್‌ ಹತ್ಯೆಯ ಬಳಿಕ ಇರಾಕ್‌ನಲ್ಲಿದ್ದ ಅಮೆರಿದ ಸೇನಾ ನೆಲೆ ಮೇಲೆ ಇರಾನ್ ದಾಳಿ ನಡೆಸಿತ್ತು. ಈಗ ಇಸ್ರೇಲ್ ಮೇಲೆ 200ಕ್ಕೂ ಅಧಿಕ ಮಿಸೈಲ್ ದಾಳಿ ನಡೆಸಿದ ಬಳಿಕ ಮತ್ತೆ ಅವರು ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ.

ಶುಕ್ರವಾರದ ಪ್ರಾರ್ಥನೆ ಬಳಿಕ ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಯಿಂದಾಗಿ ಹತ್ಯೆಯಾದ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ನಾಯಕ ಹಸನ್ ನಸ್ರಲ್ಲಾನ ಸ್ಮರಣ ಸಮಾರಂಭವೂ ನಡೆಯಲಿದೆ.

ಹಿಜ್ಬುಲ್ಲಾ ನಾಯಕ ನಸ್ರಲ್ಲಾ ಹತ್ಯೆ ಸಣ್ಣ ವಿಚಾರವಲ್ಲ ಎಂದಿದ್ದ ಖಮೇನಿ, ಬುಧವಾರ ಇರಾನ್‌ನಾದ್ಯಂತ ಸಾರ್ವಜನಿಕ ಶೋಕಾಚರಣೆ ಘೋಷಿಸಿದ್ದರು.

ಗುರುವಾರ ಟೆಹ್ರಾನ್‌ನಲ್ಲಿದ್ದ ಅಮೆರಿಕ ರಾಯಭಾರ ಕಚೇರಿಯ ಹಳೆಯ ಕಟ್ಟಡದ ಸಮೀಪ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು, ಹಿಜ್ಬುಲ್ಲಾ ಹಾಗೂ ಇರಾನ್ ಧ್ವಜವನ್ನು ಹಿಡಿದು ಇಸ್ರೇಲ್ ವಿರುದ್ಧ ಘೋಷಣೆ ಕೂಗಿದ್ದಾರೆ. ಗಾಜಾ ಪಟ್ಟಿ ಹಾಗೂ ಲೆಬನಾನ್‌ನಲ್ಲಿ ನಡೆಸುತ್ತಿರುವ ‘ಯುದ್ಧಪರಾಧ’ವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT