ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಸ್ರಲ್ಲಾ ಉತ್ತರಾಧಿಕಾರಿ ಸೈಫುದ್ದೀನ್ ಗುರಿಯಾಗಿಸಿ ಬಾಂಬ್‌ ಮಳೆಗರೆದ ಇಸ್ರೇಲ್

Published : 4 ಅಕ್ಟೋಬರ್ 2024, 2:35 IST
Last Updated : 4 ಅಕ್ಟೋಬರ್ 2024, 2:35 IST
ಫಾಲೋ ಮಾಡಿ
Comments

ಟೆಲ್ ಅವಿವ್ (ಇಸ್ರೇಲ್): ಹತ್ಯೆಗೀಡಾದ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ನಾಯಕ ಹಸನ್ ನಸ್ರಲ್ಲಾನ ಸೋದರ ಸಂಬಂಧಿ ಹಾಗೂ ಆತನ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿರುವ ಹಶೀಂ ಸೈಫುದ್ದೀನ್ ‌ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ಶುಕ್ರವಾರ ಭಾರಿ ಬಾಂಬ್ ದಾಳಿ ನಡೆಸಿವೆ.

ಲೆಬನಾನ್ ರಾಜಧಾನಿ ಬೈರೂತ್‌ ಸಮೀಪ ಇದ್ದ ಭೂಗತ ಬಂಕರ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ,

ಹಿಜ್ಬುಲ್ಲಾ ನಾಯಕರು ಸಭೆ ನಡೆಸುತ್ತಿದ್ದ ಸ್ಥಳವನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನ ವಿಮಾನಗಳು ಬಾಂಬ್‌ ಮಳೆಗರೆದಿವೆ ಎಂದು ಹೆಸರು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯುದ್ಧ ಆರಂಭವಾದ ಬಳಿಕ ಇಸ್ರೇಲ್ ನಡೆಸಿದ ಅತಿ ದೊಡ್ಡ ಬಾಂಬ್ ದಾಳಿ ಇದಾಗಿದೆ ಎಂದು ಲೆಬನಾನ್‌ನ ಸರ್ಕಾರಿ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಹಿಜ್ಬುಲ್ಲಾ ಹಿಡಿತ ಇರುವ ದಕ್ಷಿಣ ಬೈರೂತ್‌ನ ಜನನಿಬಿಡ ಧೈಯಾ ಪ್ರದೇಶದಲ್ಲಿ ಈ ಸರಣಿ ಬಾಂಬ್ ದಾಳಿ ನಡೆಸಲಾಗಿದೆ. ಬಾಂಬ್ ದಾಳಿಯ ಅಲೆಗಳು ಇಡೀ ನಗರವನ್ನು ಆವರಿಸಿದ್ದು, ದಾಳಿಯ ತೀವ್ರತೆಗೆ ಕಟ್ಟಡಗಳು ಕಂಪಿಸಿವೆ. ದಾಳಿಯ ಶಬ್ದ 15 ಮೈಲಿ ದೂರದವರೆಗೂ ಕೇಳಿಸಿದೆ. ದಾಳಿಯ ಬಳಿಕ ಸೈಫುದ್ದೀನ್ ಸಹಿತ ಹಿಜ್ಬುಲ್ಲಾ ನಾಯಕರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT