ಜೆರುಸಲೇಂ: ಭ್ರಷ್ಟಚಾರದ ಆರೋಪ ಎದುರಿಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿಚಾರಣೆ ಪುನರಾರಂಭಗೊಂಡಿದ್ದು, ನೆತನ್ಯಾಹು ಸೋಮವಾರ ನ್ಯಾಯಾಲಯಕ್ಕೆ ಹಾಜರಾದರು.

ಈ ನಡುವೆ ಲಿಕುಡ್ ಪಕ್ಷದ ಸದಸ್ಯರು ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾದರು.

ಮಾರ್ಚ್ 23 ರಂದು ನಡೆದ ಚುನಾವಣೆಯಲ್ಲಿ ಪ್ರಧಾನಿ ನೆತನ್ಯಾಹು ಭವಿಷ್ಯ ನಿರ್ಧಾರವಾಗಬೇಕಿತ್ತು. ಆದರೆ ಆ ಚುನಾವಣೆಯಲ್ಲಿ ಯಾವುದೇ ಸ್ಪಷ್ಟ ಫಲಿತಾಂಶ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಬೆಂಜಮಿನ್ ಅವರನ್ನು ಭೇಟಿಯಾದ ಪಕ್ಷದ ಸದಸ್ಯರು ಮುಂದಿನ ಸರ್ಕಾರದ ರಚನೆ ಕುರಿತಾಗಿ ಚರ್ಚೆ ನಡೆಸಿದರು.

ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ವಂಚನೆ, ನಂಬಿಕೆ ದ್ರೋಹ ಮತ್ತು ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಆದರೆ ಈ ಎಲ್ಲಾ ಆರೋಪಗಳನ್ನು ನೆತನ್ಯಾಹು ತಳ್ಳಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.