ಕೈರೊ/ಜೆರುಸಲೇಂ: ಹಮಾಸ್ ಮುಖ್ಯಸ್ಥ ಮೊಹಮ್ಮದ್ ಡೀಫ್ ಇದ್ದರು ಎನ್ನಲಾದ ನೆಲೆ ಗುರಿಯಾಗಿಸಿ ಇಸ್ರೇಲ್ ಸೇನೆ ಶನಿವಾರ ವಾಯುದಾಳಿ ನಡೆಸಿದೆ. ಕನಿಷ್ಠ 71 ಪ್ಯಾಲೆಸ್ಟೀನಿಯರು ಸತ್ತಿದ್ದಾರೆ.

ಆದರೆ, ಡೀಫ್ ಕೂಡಾ ಹತರಾಗಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ ಎಂದು ಭದ್ರತಾ ಪಡೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಡೀಫ್ ಅವರು ಅಲ್ ಮವಾಸಿ ನಗರದಲ್ಲಿ ಇಸ್ರೇಲ್ನ ಮಾನವೀಯ ನೆರೆವಿನ ವಲಯದಲ್ಲಿ ಅಡಗಿದ್ದರು’ ಎಂದು ಸೇನಾ ರೇಡಿಯೊ ವರದಿ ಮಾಡಿದೆ.

ಡೀಫ್, ಇಸ್ರೇಲ್ನ ಮೇಲೆ ಅ. 7ರಂದು ಹಮಾಸ್ ಬಂಡುಕೋರರು ನಡೆಸಿದ್ದ ದಾಳಿಯ ಮಾಸ್ಟರ್ ಮೈಂಡ್ ಡೀಫ್ ಆಗಿದ್ದರು. ಇವರನ್ನು ಗುರಿಯಾಗಿಸಿ ಇಸ್ರೇಲ್ ಈ ಹಿಂದೆ ಏಳು ಬಾರಿ ದಾಳಿ ನಡೆಸಿದ್ದರೂ ಪಾರಾಗಿದ್ದರು. ಇಸ್ರೇಲ್ ಸೇನೆಯು ‘ಮೋಸ್ಟ್ ವಾಂಟೆಡ್’ನ ಪಟ್ಟಿಯಲ್ಲಿ ದಶಕದಿಂದ ಇವರ ಹೆಸರಿತ್ತು.
.ವಿಧಾನಸಭೆ ಉಪಚುನಾವಣೆ: ಇಂಡಿಯಾ ಬಣಕ್ಕೆ 10, ಬಿಜೆಪಿಗೆ 2 ಸ್ಥಾನ.ಮುಂಬೈ | ₹29,000 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ.
ಗಾಜಾದ ಆರೊಗ್ಯ ಸಚಿವಾಲಯವು, ‘ಇಸ್ರೇಲ್ ಸೇನೆಯ ವಾಯುದಾಳಿಯಲ್ಲಿ ಕನಿಷ್ಠ 71 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದು, 289 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

ಹಮಾಸ್ ನಿಯಂತ್ರಣದಲ್ಲಿರುವ ಮಾಧ್ಯಮ ಸಂಸ್ಥೆಯು, ಕನಿಷ್ಠ 100 ಮಂದಿ ಸತ್ತಿದ್ದಾರೆ ಎಂದು ಹೇಳಿದೆ. ದಾಳಿ ಕುರಿತು ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಇಸ್ರೇಲ್ನ ಸೇನೆಯು ಪ್ರತಿಕ್ರಿಯಿಸಿದೆ.

ದಾಳಿ ನಡೆದ ಸಂದರ್ಭದಲ್ಲಿ ಡೀಫ್ ಕೂಡಾ ಇದ್ದರೆ ಎಂಬುದನ್ನು ಹಮಾಸ್ನ ಅಧಿಕಾರಿಯು ದೃಢಪಡಿಸಿಲ್ಲ. ಡೀಫ್ ಹತ್ಯೆ ಕುರಿತು ಇಸ್ರೇಲ್ನ ಸೇನೆಯ ಪ್ರತಿಪಾದನೆಯು ಅಸಂಬದ್ಧ ಎಂದು ಹಮಾಸ್ ಪ್ರತಿಕ್ರಿಯಿಸಿದೆ.

ಮೃತಪಟ್ಟಿರುವ ಎಲ್ಲರೂ ನಾಗರಿಕರು. ಇದು, ಯುದ್ಧದ ನರಮೇಧವಲ್ಲದೇ ಬೇರೇನೂ ಅಲ್ಲ ಹಮಾಸ್ನ ವಕ್ತಾರ ಅಬು ಜುಹ್ರಿ ಅವರು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.