ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೆಬನಾನ್: ಹಿಜ್ಬುಲ್ಲಾದ ಸಾವಿರಾರು ರಾಕೆಟ್ ಲಾಂಚರ್‌ಗಳನ್ನು ನಾಶಗೊಳಿಸಿದ ಇಸ್ರೇಲ್

Published : 25 ಆಗಸ್ಟ್ 2024, 6:29 IST
Last Updated : 25 ಆಗಸ್ಟ್ 2024, 6:29 IST
ಫಾಲೋ ಮಾಡಿ
Comments

ಜೆರುಸಲೇಂ: ದಕ್ಷಿಣ ಲೆಬನಾನ್ ಮೇಲೆ ಭಾನುವಾರ ಬೆಳಿಗ್ಗೆ ಹಿಜ್ಬುಲ್ಲಾದ ನೆಲೆ ಗುರಿಯಾಗಿಸಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ.

ದಕ್ಷಿಣ ಲೆಬನಾನ್‌ನಲ್ಲಿ ನೆಲೆಗೊಂಡಿದ್ದ ಇರಾನ್ ಬೆಂಬಲಿತ ಹಿಜ್ಬುಲ್ಲಾದ ಸಾವಿರಾರು ರಾಕೆಟ್ ಲಾಂಚರ್‌ಗಳನ್ನು ಇಸ್ರೇಲ್‌ನ ನೂರಾರು ಐಎಎಫ್ ಫೈಟರ್ ಜೆಟ್‌ಗಳು ನಾಶಗೊಳಿಸಿದೆ ಎಂದು ಮಿಲಿಟರಿ ಹೇಳಿದೆ.

ಉತ್ತರ ಹಾಗೂ ಕೇಂದ್ರ ಇಸ್ರೇಲ್ ಗುರಿಯಾಗಿಸಿ ಈ ರಾಕೆಟ್ ಲಾಂಚರ್‌ಗಳನ್ನು ಇರಿಸಲಾಗಿತ್ತು ಎಂದು ಅದು ತಿಳಿಸಿದೆ.

ದೇಶದ ಜನರ ರಕ್ಷಣೆ ಏನೂ ಬೇಕಾದರೂ ಮಾಡಲು ಸಿದ್ಧ: ನೆತನ್ಯಾಹು

'ದೇಶದ ಜನರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಹೇಳಿದ್ದಾರೆ.

'ಯಾರೇ ನಮಗೆ ಹಾನಿ ಮಾಡಿದರೂ ಅವರ ವಿರುದ್ಧ ಪ್ರತಿದಾಳಿ ನಡೆಸಲಿದ್ದೇವೆ. ದೇಶ ರಕ್ಷಣೆಗಾಗಿ ಎಲ್ಲವನ್ನೂ ಮಾಡಲಿದ್ದೇನೆ' ಎಂದು ಎಚ್ಚರಿಸಿದ್ದಾರೆ.

ಹಿಜ್ಬುಲ್ಲಾ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ 48 ತಾಸಿನ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT