ಟೆಲ್ ಅವಿವ್: ಲೆಬನಾನ್ ರಾಜಧಾನಿ ಬೈರೂತ್ನ ದಕ್ಷಿಣ ಭಾಗದಲ್ಲಿ ಇಸ್ರೇಲ್ ಪಡೆಗಳು ಗುರುವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 12 ರಕ್ಷಣಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ.

ಬಾಲ್ಬೇಕ್ ನಗರದಲ್ಲಿರುವ ನಾಗರಿಕ ರಕ್ಷಣಾ ಕೇಂದ್ರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎಂದು ಸ್ಥಳೀಯ ಗವರ್ನರ್ ಹೇಳಿದ್ದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
.ನಿಗೂಢ ಪೇಜರ್ ದಾಳಿ ನಮ್ಮದೇ ಎಂದ ಇಸ್ರೇಲ್! ಸಂಚಲನಕ್ಕೆ ಕಾರಣವಾಗಿದ್ದ ಘಟನೆ.
‘ದಾಳಿಯಲ್ಲಿ ನಾಗರಿಕ ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಬಿಲಾಲ್ ರಾದ್ ಮೃತಪಟ್ಟಿದ್ದಾರೆ. ಕಟ್ಟಡದ ಅವಶೇಷಗಳಡಿ ಅವರ ಮೃತದೇಹ ಪತ್ತೆಯಾಗಿದೆ. ನಮಗೆ ತಿಳಿದಿರುವ ಪ್ರಕಾರ ಇನ್ನೂ 20 ಮಂದಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ’ ಎಂದು ಗವರ್ನರ್ ಬಚಿರ್ ಖೋಡ್ರ್ ತಿಳಿಸಿದ್ದಾರೆ.

ಲೆಬನಾನ್ ಸರ್ಕಾರದ ಅಧೀನದಲ್ಲಿರುವ ‘ಲೆಬನಾನ್ ನಾಗರಿಕ ರಕ್ಷಣಾ ಏಜೆನ್ಸಿ’ಯು ತುರ್ತು ಹಾಗೂ ವೈದ್ಯಕೀಯ ನೆರವನ್ನು ನೀಡುವ ಸಂಸ್ಥೆಯಾಗಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ.
.ಲೆಬನಾನ್ನಲ್ಲಿ ನಿಲ್ಲದ ಇಸ್ರೇಲ್ ಆಕ್ರಮಣ: ಬೈರೂತ್ ಮೇಲೆ ಮತ್ತೆ ದಾಳಿ.
ಈ ದಾಳಿಯ ಬಗ್ಗೆ ಇಸ್ರೇಲ್ನಿಂದ ಯಾವುದೇ ಪ್ರತಿಕ್ರಿಯೆ ಇದುವೆರೆಗೂ ಬಂದಿಲ್ಲ.

ಸಿರಿಯಾ ರಾಜಧಾನಿ ಡಮಾಸ್ಕಸ್ನ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆದ ದಿನದಂದೇ ಬೈರೂತ್ ಮೇಲೆಯೂ ಆಕ್ರಮಣ ನಡೆದಿದೆ. ಪ್ಯಾಲೆಸ್ಟೀನಿ ಇಸ್ಲಾಮಿಕ್ ಜಿಹಾದ್ನೊಂದಿಗೆ ಸಂಬಂಧ ಇರುವ ಇರಾನ್ ಬೆಂಬಲಿತ ಉಗ್ರ ಸಂಘಟನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸಮರ್ಥನೆ ನೀಡಿದೆ.

ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವಿಗೀಡಾಗಿ 16 ಮಂದಿ ಗಾಯಗೊಂಡಿದ್ದರು. ಇದರಲ್ಲಿ ಮಕ್ಕಳು ಹಾಗೂ ಮಹಿಳೆಯರು ಸೇರಿದ್ದಾರೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
.ಸಿರಿಯಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 15 ಸಾವು.
ಪ್ಯಾಲೆಸ್ಟೀನಿ ಇಸ್ಲಾಮಿಕ್ ಜಿಹಾದ್ ಸೆಂಟರ್ಗೆ ಸೇರಿದ ಕಮಾಂಡ್ ಸೆಂಟರ್ ಮೇಲೆ ದಾಳಿ ನಡೆಸಲಾಗಿದೆ. ಅಲ್ಲಿ ಭಾರಿ ಧ್ವಂಸ ಸಂಭವಿಸಿದೆ ಎಂದು ಇಸ್ರೇಲ್ ಹೇಳಿದೆ. ಅಲ್ಲದೆ ತನ್ನ ಪ್ರದೇಶದಲ್ಲಿ ಉಗ್ರಗಾಮಿ ಗುಂಪುಗಳಿಗೆ ಕಾರ್ಯಾಚರಣೆ ಮಾಡಲು ಅನುಮತಿಸಿದ ಸಿರಿಯಾ ಸರ್ಕಾರವನ್ನು ದೂಷಿಸಿದೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
.ಗಾಜಾ, ಲೆಬನಾನ್ನ 50 ಸ್ಥಳಗಳ ಮೇಲೆ ರಾತ್ರೋರಾತ್ರಿ ದಾಳಿ ಮಾಡಿದ ಇಸ್ರೇಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.