ರೋಮ್: ಇಟಲಿ ಮತ್ತು ಗ್ರಿಸ್ನಲ್ಲಿ ಕೋವಿಡ್ ನಿರ್ಬಂಧಗಳನ್ನು ಭಾನುವಾರ ಸಡಿಲಿಕೆ ಮಾಡಲಾಗಿದ್ದು, ಯುರೋಪಿಯನ್ನರ ಬೇಸಿಗೆ ಪ್ರವಾಸ ಕಾಲದ ಬಳಿಕ ಹಂತ ಹಂತವಾಗಿ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ವಿಧಿಸಲಾಗಿದ್ದ ಕೋವಿಡ್ನ ಎಲ್ಲಾ ನಿರ್ಬಂಧಗಳನ್ನು ತೆಗದು ಹಾಕಲಾಗಿದೆ ಎಂದು ಗ್ರೀಸ್ ನಾಗರಿಕ ವಿಮಾನ ಪ್ರಾಧಿಕಾರ ಪ್ರಕಟಿಸಿದೆ. ಎಂದಿನಂತೆ ವಿಮಾನ ನಿಲ್ದಾಣ ಮತ್ತು ವಿಮಾನದೊಳಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದೆ.

ಇಟಲಿಯಲ್ಲಿ ರೆಸ್ಟೋರೆಂಟ್, ಸಿನಿಮಾ, ಜಿಮ್ ಮತ್ತು ಇತರೆ ಸ್ಥಳಗಳ ಪ್ರವೇಶಕ್ಕೆ ಅಗತ್ಯವಿದ್ದ ಆರೋಗ್ಯ ಪಾಸ್ ವ್ಯವಸ್ಥೆಯನ್ನು ರದ್ದುಗೊಳಿಸಿದೆ. ಕೆಲಸದ ಸ್ಥಳ, ಅಂಗಡಿಗಳು ಸೇರಿದಂತೆ ಕೆಲ ಒಳಾಂಗಣದಲ್ಲೂ ಮಾಸ್ಕ್ ಧರಿಸುವುದು ಕೊನೆಗೊಳಿಸಲಾಗಿದೆ. ಸಾರ್ವಜನಿಕ ಸಾರಿಗೆ, ಸಿನಿಮಾ ಮತ್ತು ಆಸ್ಪತ್ರೆಗಳಲ್ಲಿ ಮಾತ್ರ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.