ಟೊಕಿಯೊ(ಜಪಾನ್):ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಿರೋಶಿಮಾ ಮೇಲೆ ನಡೆದ ಮೊದಲ ಅಣುಬಾಂಬ್ ದಾಳಿಗೆ 73 ವರ್ಷ ತುಂಬಿದೆ. ಪ್ರಯುಕ್ತ ಅದರ ಸ್ಮರಣಾರ್ಥ ಜಪಾನ್ನಲ್ಲಿ ವಿವಿಧ ಸಮಾರಂಭಗಳನ್ನು ಆಯೋಜಿಸಲಾಗಿದೆ.

1945ರ ಆಗಸ್ಟ್ 6ರ ಬೆಳಗಿನ 8.15ರ ಘಳಿಗೆಯು ಹಿರೋಶಿಮಾ ಪಾಲಿಗೆ ಕರಾಳ ದಿನವಾಗಿತ್ತು. ಇಡೀ ವಿಶ್ವವೇ ಎಂದೂ ಮರೆಯಲಾಗದ ದಿನವದು.

ಅಂದು ಅಮೆರಿಕದ ‘ಬಿ 29’ ಬಾಂಬರ್ ಯುದ್ಧವಿಮಾನ ಈ ನಗರದ ಮೇಲೆ ಹಾಕಿದ ಅಣುಬಾಂಬ್ಗೆ ಇಡೀ ನಗರವೇ ಸ್ಮಶಾನವಾಯಿತು. ಈ ವೇಳೆ 1.40 ಲಕ್ಷ ಜನ ಸಾವಿಗೀಡಾಗಿದ್ದರು.

ಆ ಕರಾಳ ದಿನದ ಸ್ಮರಣಾರ್ಥ ಮಾತನಾಡಿರುವ ಟೊಕಿಯೊದ ಮೇಯರ್, ಜಾಗತಿಕವಾಗಿ ಹೆಚ್ಚುತ್ತಿರುವ ಅತೀಯಾದ‘ರಾಷ್ಟ್ರೀಯತೆ’ಯು ಶಾಂತಿಯನ್ನು ಕದಡುತ್ತಿದೆ ಎಂದು ಎಚ್ಚರಿಸಿದ್ದಾರೆ.

ಪರಮಾಣು ಮುಕ್ತವಾಗಬೇಕು

‘ವಿಶ್ವ ಪರಮಾಣು ಶಸ್ತ್ರಾಸ್ತ್ರ ಮುಕ್ತವಾಗಬೇಕು‘ ಎಂದು ಶಾಂತಿ ಸ್ಮಾರಕ ಉದ್ಯಾನದಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಹಿರೋಶಿಮಾದ ಮೇಯರ್ ಕಝಮಿ ಮಾಟ್ಸುಯಿ ಕರೆ ನೀಡಿದ್ದು, ಜಾಗತಿಕವಾಗಿ ಹೆಚ್ಚುತ್ತಿರುವ ಅತಿಯಾದ ‘ರಾಷ್ಟ್ರೀಯತೆ’ಯು ಶಾಂತಿಯನ್ನು ಕದಡುತ್ತಿದೆ ಎಂದು ಎಚ್ಚರಿಕೆಯ ಮಾತನ್ನೂ ಹೇಳಿದ್ದಾರೆ.

‘ಕೆಲವು ರಾಷ್ಟ್ರಗಳು ಸ್ವಯಂ–ಕೇಂದ್ರಿತ ‘ರಾಷ್ಟ್ರೀಯತೆ’ಯನ್ನು ವ್ಯಕ್ತಪಡಿಸುತ್ತಿವೆ. ಜತೆಗೆ, ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುತ್ತಿವೆ’ ಎಂದು ಅವರು ನಿರ್ದಿಷ್ಟ ದೇಶಗಳ ಹೆಸರು ಹೇಳದೆ ಆತಂಕ ವ್ಯಕ್ತಪಡಿಸಿದ್ದಾರೆ.

1945ರ ಆ. 6ರ ಬೆಳಗಿನ 8.15ಕ್ಕೆ ನಡೆದ ಬಾಂಬ್ ದಾಳಿಯ ನೆನಪಿನಲ್ಲಿ ಅದೇ ಸಮಯಕ್ಕೆ ದೇಶದಾದ್ಯಂತ ಮೌನ ಆಚರಿಸಲಾಗುತ್ತದೆ. ಹಿರೋಶಿಮಾದ ಶಾಂತಿ ಸ್ಮಾರಕ ಉದ್ಯಾನದಲ್ಲಿ ಸಮಾರಂಭ ಜರುಗುತ್ತದೆ. ಈ ಕಾರ್ಯಕ್ರಮದಲ್ಲಿ ಜಪಾನ್ ಪ್ರಧಾನಿ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸುತ್ತಾರೆ.

ಎರಡನೆಯ ಜಾಗತಿಕ ಯುದ್ಧದ ಅಂತ್ಯದಲ್ಲಿ ಜಪಾನ್ ಮೇಲೆ ಅಮೆರಿಕ ಎರಡು ಪರಮಾಣು ದಾಳಿ ಮಾಡಿತು. ಮೊದಲು ಹಿರೋಶಿಮಾದಲ್ಲಿ ಮತ್ತು ಮೂರು ದಿನಗಳ ನಂತರ ನಾಗಸಾಕಿಯಲ್ಲಿ ದಾಳಿ ನಡೆಯಿತು. ಈ ಎರಡು ಬಾಂಬ್ ಸ್ಫೋಟಗಳಿಂದಾಗಿ ಹಿರೋಷಿಮಾದಲ್ಲಿ 1,40,000 ಜನ ಮತ್ತು ನಾಗಸಾಕಿಯಲ್ಲಿ 74,000 ಜನ ಜೀವ ತೆತ್ತರು.

2016ರ ಮೇನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮೊದಲ ಬಾರಿಗೆ ಹಿರೋಶಿಮಾಕ್ಕೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.