ಕಾಬೂಲ್: ಅಫ್ಗಾನಿಸ್ತಾನ ತಾಲಿಬಾನ್ ಕೈವಶವಾದ ಒಂದು ತಿಂಗಳೊಳಗೆ ಕಾಬೂಲ್ ವಿಮಾನ ನಿಲ್ದಾಣದ ಕೆಲ ಮಹಿಳಾ ಉದ್ಯೋಗಿಗಳು ಕೆಲಸಕ್ಕೆ ಮರಳಿದ್ದಾರೆ.

ಆಗಸ್ಟ್ 15ರಂದು ಅಫ್ಗನ್‌ನಲ್ಲಿ ತಾಲಿಬಾನ್ ಹಿಡಿತ ಸಾಧಿಸುವುದಕ್ಕೂ ಮೊದಲು 80ಕ್ಕೂ ಹೆಚ್ಚು ಮಹಿಳೆಯರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಈ ಪೈಕಿ 12 ಮಹಿಳೆಯರು ಕೆಲಸಕ್ಕೆ ಮರಳಿದ್ದಾರೆ.

ಮುಂದಿನ ಆದೇಶದವರೆಗೆ ಕೆಲಸಗಳಿಗೆ ಹೋಗದಂತೆ ಮಹಿಳೆಯರಿಗೆ ತಾಲಿಬಾನ್ ಸೂಚಿಸಿತ್ತು. ಆದರೆ ಕೆಲವರಿಗೆ ಕೆಲಸಕ್ಕೆ ಮರಳಲು ಅನುಮತಿ ನೀಡಿತ್ತು.

ಇದನ್ನೂ ಓದಿ– ಅಫ್ಗಾನಿಸ್ತಾನದಲ್ಲಿ ವಿಶಾಲ ಮನಸ್ಥಿತಿ ಸರ್ಕಾರ ರಚನೆಗೆ ಭಾರತ, ಆಸ್ಟ್ರೇಲಿಯಾ ಆಗ್ರಹ

‘ಕಾಬೂಲ್ ವಿಮಾನ ನಿಲ್ದಾಣದ ಮುಖ್ಯ ದ್ವಾರದಲ್ಲಿ ಆರು ಮಹಿಳಾ ಸಿಬ್ಬಂದಿ ಶನಿವಾರ ಕಾರ್ಯನಿರ್ವಹಿಸುತ್ತಿದ್ದರು. ದೇಶೀಯ ವಿಮಾನದಲ್ಲಿ ಆಗಮಿಸಿದ ಮಹಿಳಾ ಪ್ರಯಾಣಿಕರ ಪರಿಶೀಲನಾ ಕಾರ್ಯದಲ್ಲಿ ಅವರು ತೊಡಗಿದ್ದರು’ ಎಂದು ಮೂಲಗಳು ಹೇಳಿವೆ.

‘ನನ್ನು ಕುಟುಂಬವನ್ನು ನೋಡಿಕೊಳ್ಳಲು ನನಗೆ ಹಣದ ಅವಶ್ಯಕತೆಯಿದೆ’ ಎಂದು 35 ವರ್ಷದ ರಾಬಿಯಾ ಜಮಾಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.