ನೈರೋಬಿ : 2032ರ ವೇಳೆಗೆ 1500 ಕೋಟಿ ಮರಗಳನ್ನು ನೆಡುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಕೀನ್ಯಾ ಸರ್ಕಾರವು, ರಾಷ್ಟ್ರವ್ಯಾಪಿ ಮರ ನೆಡುವ ದಿನವಾದ ನ.13ರಂದು ಸಾರ್ವಜನಿಕ ರಜಾದಿನ ಘೋಷಿಸಿದೆ.

ಅಧ್ಯಕ್ಷ ವಿಲಿಯಂ ರುಟೊ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಕ್ಯಾಬಿನೆಟ್ ಸಭೆಯ ನಂತರ, ಆಂತರಿಕ ಸಚಿವ ಕಿತೂರೆ ಕಿಂಡಿಕಿ ಸೋಮವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನ ತಮ್ಮ ಖಾತೆಯಲ್ಲಿ ಗೆಜೆಟ್ ನೋಟಿಸ್ ಪೋಸ್ಟ್ ಮಾಡುವ ಮೂಲಕ ಈ ಘೋಷಣೆ ಮಾಡಿದ್ದಾರೆ.

‘ನ.13ರ ಸೋಮವಾರ ಸರ್ಕಾರ ವಿಶೇಷ ರಜಾದಿನ ಘೋಷಿಸಿದೆ. ಈ ದಿನದಂದು ದೇಶದಾದ್ಯಂತ ಜನರು ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ನಮ್ಮ ರಾಷ್ಟ್ರವನ್ನು ಉಳಿಸುವ ರಾಷ್ಟ್ರೀಯ ಪ್ರಯತ್ನಗಳಿಗೆ ದೇಶಭಕ್ತಿಯ ಕೊಡುಗೆಯಾಗಿ ಸಸಿಗಳನ್ನು ನೆಡುವ ನಿರೀಕ್ಷೆಯಿದೆ’ ಎಂದು ಕಿಂಡಿಕಿ ಹೇಳಿದ್ದಾರೆ.

ಕೀನ್ಯಾದಲ್ಲಿ ಅರಣ್ಯ ಪ್ರದೇಶ ಶೇ 7ರಷ್ಟಿದ್ದು, ಇದನ್ನು ಶೇ 10ರಷ್ಟಕ್ಕೆ ಹೆಚ್ಚಿಸಲು ಸರ್ಕಾರ ಪ್ರಸ್ತುತ ಹಣಕಾಸು ವರ್ಷದಲ್ಲಿ ₹ 8 ಕೋಟಿ ಡಾಲರ್ ಮೀಸಲಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.