ನೈರೋಬಿ: ಕಳೆದ ಎರಡು ವರ್ಷಗಳಲ್ಲಿ 42 ಮಹಿಳೆಯರನ್ನು ಹತ್ಯೆ ಮಾಡಿದ್ದ ಶಂಕಿತ ಸರಣಿ ಹಂತಕನನ್ನು ಬಂಧಿಸಲಾಗಿದೆ ಎಂದು ಕೀನ್ಯಾದ ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ನೈರೋಬಿಯ ಪ್ರದೇಶವೊಂದರ ಕ್ವಾರಿಯಲ್ಲಿ ಒಂಬತ್ತು ಮಹಿಳೆಯರ ಛಿದ್ರಗೊಂಡ ಶವಗಳು ಪತ್ತೆಯಾಗಿದ್ದವು. ಪ್ರಕರಣ ತನಿಖೆ ನಡೆಸಿದ ಪೊಲೀಸರು ಹಂತಕನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಹಂತಕನನ್ನು 33 ವರ್ಷದ ಕಾಲಿನ್ಸ್ ಜುಮೈಸಿ ಖಲುಶಾ ಎಂದು ಗುರುತಿಸಲಾಗಿದೆ. ಈತ ಹೆಂಡತಿ ಸೇರಿದಂತೆ ಇತರೆ ಮಹಿಳೆಯರನ್ನು ಆಮಿಷವೊಡ್ಡಿ, ದೌರ್ಜನ್ಯ ನಡೆಸಿ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಇಲಾಖೆಯ ನಿರ್ದೇಶಕ ಮೊಹಮ್ಮದ್ ಐ. ಅಮೀನ್ ತಿಳಿಸಿದ್ದಾರೆ.

2022ರಿಂದ ಇದುವರೆಗೆ (2 ವರ್ಷಗಳಲ್ಲಿ) 42 ಮಹಿಳೆಯರನ್ನು ಹತ್ಯೆ ಮಾಡಿರುವುದಾಗಿ ಕಾಲಿನ್ಸ್ ಒಪ್ಪಿಕೊಂಡಿದ್ದಾನೆ. ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಮೃತಪಟ್ಟ ಮಹಿಳೆಯರು 18ರಿಂದ 30 ವರ್ಷದೊಳಗಿನವರಾಗಿದ್ದಾರೆ. ಈ ಸರಣಿ ಹತ್ಯೆ ಪ್ರಕರಣ ಕೀನ್ಯಾದ ಜನರನ್ನು ಬೆಚ್ಚಿಬೀಳಿಸಿತ್ತು.
.50ಕ್ಕೂ ಹೆಚ್ಚು ಮಹಿಳೆಯರ ಹತ್ಯೆಗೈದಿದ್ದ ಸರಣಿ ಹಂತಕ ರಾಬರ್ಟ್ ಜೈಲಿನಲ್ಲಿ ಸಾವು.ಹೈದರಾಬಾದ್: ಹೆಂಡತಿ ಬಿಟ್ಟಿದ್ದಕ್ಕೆ 18 ಮಹಿಳೆಯರ ಕೊಲೆ?! ಸರಣಿ ಹಂತಕ ಸೆರೆ.4 ದಶಕ, 93 ಕೊಲೆ: ಅಮೆರಿಕದ ಸರಣಿ ಹಂತಕ ಸ್ಯಾಮ್ಯುಯೆಲ್ ಲಿಟ್ಟಲ್ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.