ಮಾಸ್ಕೋ:ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿರುವ ರಷ್ಯಾ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂಬ ಅಮೆರಿಕದ ಹೇಳಿಕೆಗೆ ಪುಟಿನ್ ಸರ್ಕಾರ ತಿರುಗೇಟು ನೀಡಿದೆ.

ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ ಕುರಿತ ಅಮೆರಿಕದ ಹೇಳಿಕೆಯು ದಿಕ್ಕು ತಪ್ಪಿಸುವ ತಂತ್ರವಾಗಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.

ಉಕ್ರೇನ್ ನೆಲದಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧಾಪರಾಧಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳೂ ಬಳಕೆಯಾಗಬಹುದೆಂದು ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಸಿದ್ದರು.

ಇದೇ ವೇಳೆ, ಉಕ್ರೇನ್‌ನ ಪೂರ್ವ ಲುಹಾನ್‌ಸ್ಕ್‌ನಲ್ಲಿ ರಷ್ಯಾದ ಪಡೆಗಳು ನಿಷೇಧಿತ ರಾಸಾಯನಿಕ ಬಾಂಬ್ ದಾಳಿ ನಡೆಸಿವೆ ಎಂದು ಪೋಪಾಸ್‌ನ ಪೊಲೀಸ್ ಮುಖ್ಯಸ್ಥ ಒಲೆಕ್ಸಿ ಬಿಲೋಶಿಟ್‌ಸ್ಕಿ ಆರೋಪಿಸಿದ್ದಾರೆ.

ಲುಹಾನ್‌ಸ್ಕ್‌ನ ಪಶ್ಚಿಮದ 100 ಕಿ.ಮೀ. ವ್ಯಾಪ್ತಿಯಲ್ಲಿ ಶನಿವಾರ ರಾಸಾಯನಿಕ ಬಾಂಬ್ ಹಾಕಲಾಗಿದೆ. ನಾಗರಿಕರನ್ನು ಸ್ಥಳಾಂತರಿಸುವ ರೈಲಿನ ಮೇಲೂ ಶೆಲ್ ದಾಳಿ ನಡೆದಿದೆ ಎಂದು ಡೊನೆಟ್‌ಸ್ಕ್ ಮಿಲಿಟರಿ ಕಮಾಂಡರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.