ಕಾಬೂಲ್: ಇಲ್ಲಿನ ಸಂವಹನ ಸಚಿವಾಲಯದ ಕಚೇರಿ ಬಳಿ ಶನಿವಾರ ಆತ್ಮಾಹುತಿ ಬಾಂಬ್ ದಾಳಿ ಮತ್ತು ಗುಂಡಿನ ದಾಳಿ ನಡೆದಿದ್ದು, ಆರು ಜನರು ನಾಗರಿಕರು ಗಾಯಗೊಂಡಿದ್ದಾರೆ.

‘ಎಲ್ಲ ಆತ್ಮಾಹುತಿ ಬಾಂಬರ್ ಮತ್ತು ಬಂದೂಕುಧಾರಿಗಳನ್ನು ಆಫ್ಗನ್ ಸೇನೆ ಹೊಡೆದುರುಳಿಸಿದೆ. 2,000ಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ’ ಎಂದು ಒಳಾಡಳಿತ ಸಚಿವಾಲಯ ಟ್ವೀಟ್ ಮಾಡಿದೆ.

ಇಲ್ಲಿಯವರೆಗೆ ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ. ಪ್ರಾಥಮಿಕ ವರದಿಯ ಪ್ರಕಾರ, ನಾಲ್ವರು ಬಂದೂಕುಧಾರಿಗಳು ಪೊಲೀಸ್ ಸಮವಸ್ತ್ರ ಧರಿಸಿ ಗುಂಡಿನ ದಾಳಿ ನಡೆಸಿದ್ದರು.

ಬೆಳಿಗ್ಗೆ 11.40ರ ವೇಳೆಗೆ ಭಾರಿ ಸ್ಫೋಟದ ಶಬ್ದ ಕೇಳಿಸಿತ್ತು. ಬಳಿಕ ನಿರಂತರವಾಗಿ ಒಂದು ಗಂಟೆ ಗುಂಡಿನ ದಾಳಿಯೂ ನಡೆದಿತ್ತು.

18 ಮಹಡಿಯ ಈ ಸಚಿವಾಲಯದ ಕಟ್ಟಡದಲ್ಲಿಯೇ ಹಲವು ನಾಗರಿಕರು ಆಶ್ರಯ ಪಡೆದಿದ್ದರು. ದಾಳಿಕೋರರೂ ಇದೇ ಕಚೇರಿಯ ಒಳಹೊಕ್ಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.