ಕೊಲಂಬೊ: ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಇಳಮ್ (ಎಲ್‌ಟಿಟಿಇ) ಮುಖ್ಯಸ್ಥರಾಗಿದ್ದ ವೇಲುಪಿಳೈ ಪ್ರಭಾಕರನ್ ಮೃತಪಟ್ಟಿದ್ದಾರೆ ಎಂದು ಆತನ ಸಹೋದರ ಮನೋಹರನ್ ಹೇಳಿದ್ದಾರೆ.

2009ರಲ್ಲಿ ಪ್ರಭಾಕರನ್ ಮತ್ತು ಅವರ ಇಡೀ ಕುಟುಂಬ ಸಾವಿಗೀಡಾಗಿದೆ ಎಂದು ಅವರ ಸಹೋದರ ಮನೋಹರನ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.

ಪ್ರಭಾಕರನ್ ವಿದೇಶದಲ್ಲಿ ಬದುಕಿದ್ದಾರೆ, ಅವರ ಮಗಳು ಇದ್ದಾಳೆ ಎಂಬುದು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ. 2009ರಲ್ಲಿ ಪ್ರಭಾಕರನ್ ಕುಟುಂಬ ಶ್ರೀಲಂಕಾ ಮಿಲಿಟರಿಗೆ ಬಲಿಯಾಗಿದೆ ಎಂದು ಮನೋಹರನ್ ಖಚಿತಪಡಿಸಿದ್ದಾರೆ.
.ಎಲ್‌ಟಿಟಿಇ ಮೇಲಿನ ನಿಷೇಧ: ಮುಂದಿನ 5 ವರ್ಷಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರ.ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ: ಪಿ. ನೆಡುಮಾರನ್ ಅಚ್ಚರಿಯ ಹೇಳಿಕೆ.
ಪ್ರಭಾಕರನ್ ಮತ್ತು ಆತನ ಮಗಳು ಬದುಕಿದ್ದಾಳೆ ಎಂದು ಜನರನ್ನು ವಂಚಿಸುತ್ತಿರುವ ತಮಿಳರ ಗುಂಪಿಗೆ ಎಚ್ಚರಿಕೆ ನೀಡಿರುವ ಮನೋಹರನ್ ಅವರು, ಪ್ರಭಾಕರನ್ ಕುಟುಂಬದವರೆಂದು ವಂಚಿಸುತ್ತಿರುವವರಿಂದ ಮೋಸಹೋಗದಿರಿ ಎಂದು ಹೇಳಿದ್ದಾರೆ.

ಡೈಲಿ ಮಿರರ್.ಎಲ್‌ಕೆ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮನೋಹರನ್ ಈ ಹೇಳಿಕೆ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ತಮಿಳು ಯವತಿಯೊಬ್ಬಳು ತಾನು ಪ್ರಭಾಕರನ್ ಪುತ್ರಿ ದ್ವಾರಕಾ ಎಂದು ಹೇಳಿಕೊಳ್ಳುತ್ತಿದ್ದಾಳೆ. ಹಾಗೂ ತಮಿಳು ವಲಸಿಗರಿಂದ ಲಕ್ಷಾಂತರ ಡಾಲರ್ ವಂಚಿಸುತ್ತಿದ್ದಾಳೆ ಎಂದು ಅವರು ಹೇಳಿದ್ದಾರೆ.

ಪ್ರಭಾಕರನ್ ಅವರ ಹಿರಿಯ ಸಹೋದರನಾಗಿ ಇಂತಹ ಸುಳ್ಳುಗಳಿಗೆ ಅಂತ್ಯ ಹಾಡುವುದು ನನ್ನ ಜವಾಬ್ದಾರಿ. ನನ್ನ ಸಹೋದರ ಬದುಕಿದ್ದಾನೆ. ವಿದೇಶದಲ್ಲಿ ವಾಸವಾಗಿದ್ದಾನ ಎಂಬುದೆಲ್ಲ ವಂದತಿ ಎಂದು ಅವರ ಹೇಳಿದರು.

1975ರಲ್ಲೇ ಲಂಕಾ ತೊರೆದಿರುವ ಮನೋಹರನ್ ಸದ್ಯ ಡೆನ್ಮಾರ್ಕ್‌ನಲ್ಲಿ ನೆಲೆಸಿದ್ದಾರೆ.

2009ರಲ್ಲಿ ಶ್ರೀಲಂಕಾ ಆರ್ಮಿ ಪ್ರಭಾಕರನ್ ಅವರನ್ನು ಕೊಂದ ನಂತರ ಎಲ್‌ಟಿಟಿಇ ನಾಮಾವಶೇಷವಾಗಿತ್ತು. ಇದಕ್ಕೂ ಮುನ್ನ ದ್ವೀಪ ರಾಷ್ಟ್ರದ ಪೂರ್ವ ಮತ್ತು ಉತ್ತರ ಪ್ರಾಂತ್ಯದಲ್ಲಿ ಪ್ರತ್ಯೇಕ ತಮಿಳು ರಾಷ್ಟ್ರಕ್ಕಾಗಿ 30 ವರ್ಷಗಳಿಂದ ಎಲ್‌ಟಿಟಿಇ ಸಶಸ್ತ್ರ ಹೋರಾಟ ನಡೆಸಿತ್ತು.
.ಎಲ್‌ಟಿಟಿಇ ಬೆಂಬಲಿಗರಿಂದ ದಾಳಿಗೆ ಸಂಚು: ಎನ್ಐಎ ಶೋಧ.25 ವರ್ಷಗಳ ಹಿಂದೆ | ಎಲ್‌ಟಿಟಿಇ ವಿರುದ್ಧ ಭಾರೀ ಕದನಕ್ಕೆ ಸಜ್ಜಾಗಿದ್ದ ಲಂಕಾ ಸೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.