ದಾವೋಸ್ : ದಾವೋಸ್‌ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ವಾರ್ಷಿಕ ಸಭೆ ನಡೆಯಲಿದೆ. ಇದಕ್ಕಾಗಿ ಸ್ವಿಟ್ಜರ್‌ಲೆಂಡ್‌ನ ಸಜ್ಜಾಗಿದೆ.

ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಯಾಗಲಿವೆ. ಪ್ರಪಂಚದಾದ್ಯಂತದ 2,800ಕ್ಕೂ ಹೆಚ್ಚು ನಾಯಕರು ಐದು ದಿನಗಳ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಉಕ್ರೇನ್ ಶಾಂತಿಯ ಕುರಿತ ಚರ್ಚೆ ಸಭೆಯ ಪ್ರಮುಖಾಂಶವಾಗಿದೆ.

ಡಬ್ಲ್ಯುಇಎಫ್ ಸಭೆಯ ವಿಧ್ಯುಕ್ತ ಆರಂಭಕ್ಕೂ ಮುನ್ನಾದಿನದಂದು ದಾವೋಸ್‌ನಲ್ಲಿ ಮೊದಲ ಬಾರಿಗೆ 90 ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ ನಡೆಯಿತು. ಈ ಸಭೆಯಲ್ಲಿ ಉಕ್ರೇನ್‌ಗಾಗಿ ಶಾಂತಿ ಯೋಜನೆ ಕುರಿತು ಚರ್ಚಿಸುವುದು ಸೇರಿದಂತೆ ಇಸ್ರೇಲ್ – ಗಾಜಾ ಸಂಘರ್ಷ, ಎಐ– ರಚಿತ ಡೀಪ್ ಫೇಕ್ ಚಿತ್ರಗಳು ತಂದೊಡ್ಡಿರುವ ಬೆದರಿಕೆ, ಹವಾಮಾನ ಬದಲಾವಣೆ, ಆರ್ಥಿಕ ಮಂದಗತಿ ಹಾಗೂ ಜಗತ್ತಿನ ಮುಂದಿರುವ ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಭಾರತದ ಪರವಾಗಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅಶ್ವಿನಿ ವೈಷ್ಣವ್ ಹಾಗೂ ಹರ್‌ದೀಪ್ ಸಿಂಗ್ ಪುರಿ ಭಾಗವಹಿಸಲಿದ್ದಾರೆ. ಹಾಗೆಯೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ರೆಡ್ಡಿ ಅವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಭದ್ರತೆಗೆ ಸೇನೆ ನಿಯೋಜನೆ: ದಾವೋಸ್‌ನಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, 5 ಸಾವಿರ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.