ಲಾಹೋರ್: ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ, ಪಿಎಂಎಲ್–ಎನ್ ಹಿರಿಯ ನಾಯಕಿ ಮರಿಯಂ ನವಾಜ್ ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ನಡೆದ ಚುನಾವಣೆಯನ್ನು ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಕ್ಷದ ಬೆಂಬಲಿತ ಸುನ್ನಿ ಇತ್ತೇಹಾದ್ ಕೌನ್ಸಿಲ್‌ನ (ಎಸ್‌ಐಸಿ) ಶಾಸಕರು ಬಹಿಷ್ಕರಿಸಿದರು. ಈ ವಿದ್ಯಮಾನದ ನಡುವೆಯೇ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್ (ಪಿಎಂಎಲ್–ಎನ್) ಪಕ್ಷದ ಹಿರಿಯ ಉಪಾಧ್ಯಕ್ಷೆ ಮರಿಯಂ (50) ಗೆಲುವು ಸಾಧಿಸಿದರು.

ಪಿಟಿಐ ಬೆಂಬಲಿತ ಎಸ್‌ಐಸಿ ಪಕ್ಷದ ರಾಣಾ ಅಫ್ತಾಬ್ ಅವರನ್ನು ಸೋಲಿಸಿದ ಮರಿಯಂ, ರಾಜಕೀಯವಾಗಿ ನಿರ್ಣಾಯಕ ಪಾತ್ರ ವಹಿಸಲಿರುವ ಹಾಗೂ 12 ಕೋಟಿ ಜನಸಂಖ್ಯೆ ಹೊಂದಿರುವ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

‘ನಮ್ಮ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪಂಜಾಬ್‌ನ ಮುಖ್ಯಮಂತ್ರಿಯಾಗಲಿದ್ದಾರೆ. ಮರಿಯಂ ನವಾಜ್ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ಚುನಾವಣೆಗೂ ಮುನ್ನವೇ, ಪಿಎಂಎಲ್–ಎನ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿತ್ತು.

ಪ್ರಾಂತೀಯ ವಿಧಾನಸಭೆಯಲ್ಲಿ ಮಾತನಾಡಿದ ಮರಿಯಂ, ‘ಪ್ರಾಂತ್ಯದಲ್ಲಿರುವ ಪ್ರತಿಯೊಬ್ಬ ಮಹಿಳೆಯು ಇಂದು ಮಹಿಳಾ ಮುಖ್ಯಮಂತ್ರಿಯನ್ನು ನೋಡಿ ಹೆಮ್ಮೆಪಡುತ್ತಾರೆ. ಭವಿಷ್ಯದಲ್ಲಿಯೂ ಮಹಿಳಾ ನಾಯಕತ್ವದ ಸಂಪ್ರದಾಯ ಮುಂದುವರಿಯಲಿದೆ. ತಂದೆ ಕುಳಿತಿದ್ದ ಕುರ್ಚಿಯಲ್ಲಿ ಕೂರಲು ಸಂತೋಷವಾಗಿದೆ. ಸೇಡು ತೀರಿಸಿಕೊಳ್ಳಲು ಅಧಿಕಾರವನ್ನು ಬಳಸಿಕೊಳ್ಳಲ್ಲ’ ಎಂದು ಹೇಳಿದರು.

‘ಸರ್ವಾಧಿಕಾರ ಇಂದಿಗೂ ಮುಂದುವರಿದಂತೆ ಕಾಣುತ್ತಿದೆ’ ಎಂದು ಎಸ್‌ಐಸಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ರಾಣಾ ಅಫ್ತಾಬ್ ಲಾಹೋರ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.