ಮಿಯಾಮಿ: ಮೂವತ್ತು ವರ್ಷಗಳಿಂದ ಸೌದಿ ರಾಜಕುಮಾರ ಎಂದು ಹೇಳಿಕೊಂಡು ಇಲ್ಲಿನ ಜನರಿಗೆ ಅಂದಾಜು ₹ 55.67 ಕೋಟಿ (8 ಮಿಲಿಯನ್ ಡಾಲರ್) ವಂಚಿಸಿದ್ದ ಆರೋಪಿ ಆಂಥೊನಿ ಗಿಗ್ನ್ಯಾಕ್‌ಗೆ 18 ವರ್ಷ ಜೈಲು ಶಿಕ್ಷೆಗೆ ವಿಧಿಸಲಾಗಿದೆ.

ಸೌದಿ ರಾಜಕುಮಾರರಂತೆ ಐಷಾರಾಮಿ ಬದುಕು ಸಾಗಿಸುತ್ತಿದ್ದ. ಸುತ್ತ-ಮುತ್ತ ಅಂಗರಕ್ಷಕರನ್ನು ಹೊಂದಿದ್ದ ಈತ ಸೌದಿ ರಾಜಮನೆತನಕ್ಕೆ ಸಂಬಂಧಿಸಿದ ನಕಲಿ ಗುರುತುಪತ್ರಗಳನ್ನು ಹೊಂದಿದ್ದ. ಈತನನ್ನು ಸೌದಿ ರಾಜಮನೆತನದ ವ್ಯಕ್ತಿಯೆಂದು ನಂಬಿದ್ದ 12 ಮಂದಿ, ಹೂಡಿಕೆ ಮತ್ತಿತರ ಹೆಸರಿನಲ್ಲಿ ಈತನ ಖಾತೆಗೆ ಹಣ ಜಮೆ ಮಾಡಿದ್ದರು. 17-18 ವರ್ಷದವನಾಗಿದ್ದಾಗಲೇ ಹಲವಾರು ವಂಚನೆ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ.

ರಿಯಲ್ ಎಸ್ಟೇಟ್‌ನಲ್ಲಿ ಹಣ ಹೂಡುವುದಾಗಿ ಹೇಳಿಕೊಂಡು ಜನರಿಂದ ಹಣ ವಸೂಲಿ ಮಾಡಿದ್ದ ಈತ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಕೈಯಲ್ಲಿಯೇ ಸಿಕ್ಕಿಬಿದ್ದಿದ್ದ. ಹಂದಿ ಮಾಂಸ ತಿನ್ನುವುದು ಸೌದಿ ರಾಜರಿಗೆ ನಿಷಿದ್ಧ. ಆದರೆ ಈತ ಇಷ್ಟಪಟ್ಟು ಹಂದಿ ಮಾಂಸ ತಿನ್ನುತ್ತಿದ್ದ. ಇದರಿಂದ ಆತನ ಬಗ್ಗೆ ಹೂಡಿಕೆದಾರರಿಗೆ ಅನುಮಾನ ಮೂಡಿತ್ತು ಎಂದು ಮಿಯಾಮಿ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

2017ರ ನವೆಂಬರ್‌ನಲ್ಲಿ ಪೊಲೀಸರು ಆಂಥೊನಿ ಗಿಗ್ನ್ಯಾಕ್‌ನನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.