ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ಶನಿವಾರ ತಡರಾತ್ರಿ ಫುಟ್ಬಾಲ್ ಪಂದ್ಯದ ವೇಳೆ ನಡೆದ ಹಿಂಸಾಚಾರದಿಂದ ಕನಿಷ್ಠ 174ಮಂದಿ ಸಾವಿಗೀಡಾಗಿದ್ದಾರೆ.

ಪೂರ್ವ ಜಾವದ ಮಲಂಗ್ನಲ್ಲಿ ನಡೆದ ಪಂದ್ಯದಲ್ಲಿ ಎದುರಾಳಿ ತಂಡ ಗೆಲುವು ಸಾಧಿಸಿದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಮೈದಾನಕ್ಕೆ ಇಳಿದು ದಾಂಧಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಿ, ಇಬ್ಬರು ಪೊಲೀಸರ ಸಹಿತ ಕನಿಷ್ಠ 174ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ಇಂಡೋನೇಷ್ಯಾದ ಪ್ರಮುಖ ಲೀಗ್ ಬಿಆರ್ಐಲಿಗಾ 1ರ ಅರೆಮಾ ಎಫ್ಸಿ ಮತ್ತು ಪರ್ಸಬೆಯ ಸುರಬಯ ತಂಡದ ನಡುವೆ ಪಂದ್ಯ ನಡೆಯುತ್ತಿತ್ತು.

ಈ ಸಂದರ್ಭದಲ್ಲಿ ಪಂದ್ಯ ಸೋತ ಕೋಪದಲ್ಲಿ ಅಭಿಮಾನಿಗಳು ಮೈದಾನಕ್ಕೆ ಇಳಿದು ದಾಂಧಲೆ ಎಬ್ಬಿಸಿದ್ದಾರೆ. ನಂತರ ಕಾಲ್ತುಳಿತ ಉಂಟಾಗಿದೆ. ಜತೆಗೆ ಉಸಿರುಗಟ್ಟಿ ಜನರು ಮೃತಪಟ್ಟಿದ್ದಾರೆ. ಕ್ರೀಡಾಂಗಣದಲ್ಲಿ 34 ಜನರು ಮೃತಪಟ್ಟರೆ, ಉಳಿದವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ಇಬ್ಬರು ಪೊಲೀಸರು ಕೂಡ ಇದ್ದಾರೆ ಎಂದು ಪೂರ್ವ ಜಾವಾ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ತಿಳಿಸಿದ್ದಾರೆ.

ಇರಾನ್: ಪೊಲೀಸ್ ಠಾಣೆ ಮೇಲೆ ಪ್ರತ್ಯೇಕತಾವಾದಿ ಗುಂಪಿನ ದಾಳಿ– 19 ಮಂದಿ ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.