ಬರ್ಲಿನ್: 'ಎಂಪಾಕ್ಸ್ ವೈರಾಣುವಿನ ಹೊಸ ಅಥವಾ ಹಳೆಯ ತಳಿಯಾಗಿರಲಿ, ಅದು ಹೊಸ ಕೋವಿಡ್ ಅಲ್ಲ' ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಯುರೋಪ್‌ನ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲೂಗ್, 'ಎಂಪಾಕ್ಸ್ ಸೋಂಕು ಹರಡುವುದನ್ನು ತಡೆಗಟ್ಟಲು ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದೆ' ಎಂದು ಹೇಳಿದ್ದಾರೆ.

'ಎಂಪಾಕ್ಸ್ ಸೋಂಕನ್ನು ನಾವೆಲ್ಲರೂ ಒಟ್ಟಾಗಿ ನಿಯಂತ್ರಿಸಬಹುದಾಗಿದೆ. ಸಾರ್ವಜನಿಕ ಆರೋಗ್ಯ ಹಾಗೂ ಕಣ್ಗಾವಲು ಮೇಲೆ ಗಮನ ಕೇಂದ್ರೀಕರಿಸಲು ಇದರಿಂದ ಸಾಧ್ಯವಾಗಲಿದೆ' ಎಂದು ಅವರು ಹೇಳಿದ್ದಾರೆ.

ಎಂಪಾಕ್ಸ್‌ನ clade 1b ತಳಿ ಹರಡುತ್ತಿರುವುದು ಜಾಗತಿಕವಾಗಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಆಫ್ರಿಕಾದಲ್ಲಿ ಹೆಚ್ಚು ಹರಡುತ್ತಿರುವ ಈ ತಳಿಯ ಪ್ರಕರಣ ಕಳೆದ ವಾರ ಸ್ವೀಡನ್‌ನಲ್ಲೂ ದೃಢಪಟ್ಟಿತ್ತು.

ಪ್ರತಿ ತಿಂಗಳು ಯುರೋಪ್ ವಲಯದಲ್ಲಿ ಎಂಪಾಕ್ಸ್‌ನ clade 2 ತಳಿಯ ಸುಮಾರು 100ರಷ್ಟು ಹೊಸ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲೂ ಕಟ್ಟೆಚ್ಚರ...

ವಿವಿಧ ದೇಶಗಳಲ್ಲಿ ಎಂಪಾಕ್ಸ್ ಸೋಂಕು ವ್ಯಾಪಿಸುತ್ತಿರುವುದರಿಂದ ಭಾರತದಲ್ಲೂ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನಿಗಾ ವಹಿಸುವಂತೆ ಸೂಚನೆ ನೀಡಿದೆ.
.ಎಂಪಾಕ್ಸ್: ಕಟ್ಟೆಚ್ಚರ ವಹಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ.ಮಂಕಿಪಾಕ್ಸ್ ಅನ್ನು ‘ಎಂಪಾಕ್ಸ್’ ಎಂದು ಮರುನಾಮಕರಣ ಮಾಡಿದ ಡಬ್ಲ್ಯುಎಚ್‌ಒ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.