ಬೀಜಿಂಗ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ತನ್ನ ಮಂಗಳಯಾನ ಕಾರ್ಯಕ್ರಮದ ಮಾಹಿತಿಯನ್ನು ಭಾರತ, ಚೀನಾ, ಯುಎಇ ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿನ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ವಿನಿಮಯ ಮಾಡಿಕೊಂಡಿದೆ.

ಇತರ ದೇಶಗಳು ಸಹ ಹಲವಾರು ಗಗನನೌಕೆಗಳನ್ನು ಉಡಾವಣೆ ಮಾಡಿವೆ. ಮಂಗಳಯಾನ ಕಾರ್ಯಕ್ರಮದ ಭಾಗವಾಗಿ ತಾನು ಉಡಾವಣೆ ಮಾಡಿರುವ ಗಗನನೌಕೆ ಹಾಗೂ ಇತರ ರಾಷ್ಟ್ರಗಳ ಗಗನನೌಕೆ ನಡುವೆ ಘರ್ಷಣೆಯಾಗಬಾರದು ಎಂಬ ಉದ್ದೇಶದಿಂದ ನಾಸಾ ಮಾಹಿತಿ ವಿನಿಮಯ ಮಾಡಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೊ, ಮಂಗಳಯಾನ ಕಾರ್ಯಕ್ರಮದಡಿ ಉಡಾವಣೆ ಮಾಡಿರುವ ಗಗನನೌಕೆ 2014ರಲ್ಲಿ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿ, ಪರಿಭ್ರಮಿಸುತ್ತಿದೆ.

ಯುಎಇಯ ‘ಹೋಪ್’ , ಚೀನಾದ ‘ತಿಯಾನ್ವೆನ್–1’ ಎಂಬ ಗಗನನೌಕೆಗಳು ಮಂಗಳ ಗ್ರಹದ ಕಕ್ಷೆಯಲ್ಲಿವೆ.

ಇದನ್ನೂ ಓದಿ... ಅಂಬಾನಿ ನಿವಾಸದ ಬಳಿ ಸ್ಫೋಟಕ ಸಂಗ್ರಹಿಸಿಟ್ಟಿದ್ದು ಸಚಿನ್ ವಾಜೆ: ಎನ್ಐಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.