ಹೈದರಾಬಾದ್: ಭಾರತದ ಎಂಡಿಎಚ್ ಹಾಗೂ ಎವರೆಸ್ಟ್‌ನ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನ್ಯೂಜಿಲೆಂಡ್‌ನ ಆಹಾರ ಸುರಕ್ಷತಾ ನಿಯಂತ್ರಕ ಹೇಳಿದೆ.

ಈ ಬಗ್ಗೆ ಬೇರೆ ದೇಶಗಳಲ್ಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ನಮಗೆ ಅರಿವಿದೆ ಎಂದು ನ್ಯೂಜಿಲೆಂಡ್‌ನ ಆಹಾರ ಸುರಕ್ಷತಾ ನಿಯಂತ್ರಕ ರಾಯಿಟರ್ಸ್‌ಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
.ಹೈನು, ಮಸಾಲೆ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ನಿರ್ಧಾರ.
ಅಮೆರಿಕ ಹಾಗೂ ಆಸ್ಟ್ರೇಲಿಯಾ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಎರಡು ಕಂಪನಿಗಳ ಮಸಾಲೆ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಕೀಟನಾಶಕ, ಎಥಿಲೀನ್ ಆಕ್ಸೈಡ್ ಇದೆ ಎಂದು ಹಾಂಕಾಂಗ್ ಕಳೆದ ತಿಂಗಳು ನಿಷೇಧ ಹೇರಿತ್ತು. ಎವರೆಸ್ಟ್ ಸಾಂಬಾರು ಪದಾರ್ಥಗಳ ಮಿಶ್ರಣವನ್ನು ಸಿಂಗಪುರ ವಾಪಸ್ ಪಡೆದಿತ್ತು.

‘ಎಥಿಲೀನ್ ಆಕ್ಸೈಡ್ ಮಾನವರಲ್ಲಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅದನ್ನು ಕ್ರಿಮಿನಾಶಕವಾಗಿ ಬಳಕೆ ಮಾಡುವುದನ್ನು ನ್ಯೂಜಿಲೆಂಡ್ ಹಾಗೂ ಇತರ ದೇಶಗಳಲ್ಲಿ ನಿಷೇಧಿಸಲಾಗಿದೆ. ಎಂಡಿಎಚ್ ಹಾಗೂ ಎವರೆಸ್ಟ್ ನ್ಯೂಜಿಲೆಂಡ್‌ನಲ್ಲಿಯೂ ಇರುವುದರಿಂದ ನಾವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ನ್ಯೂಜಿಲೆಂಡ್‌ನ ಆಹಾರ ಸುರಕ್ಷತೆ ನಿಯಂತ್ರಕದ ಹಂಗಾಮಿ ಉಪನಿರ್ದೇಶಕ ಜೆನ್ನಿ ಬಿಷಪ್ ಹೇಳಿದ್ದಾರೆ.
.ಮಸಾಲೆ ಉತ್ಪನ್ನಗಳು ಸುರಕ್ಷಿತ ಎಂದ ಎವರೆಸ್ಟ್.
ಈ ಬಗ್ಗೆ ಮಾಹಿತಿ ಬಯಸಿ ಉಭಯ ಕಂಪನಿಗಳನ್ನು ರಾಯಿಟರ್ಸ್ ಸಂಪರ್ಕಿಸಿತಾದರೂ, ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಭಾರತದಲ್ಲೂ ಈ ಕಂಪನಿಗಳ ಮಸಾಲೆ ಉತ್ಪನ್ನಗಳ ಮಾದರಿಗಳ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದರೂ, ಈವರೆಗೂ ಅವುಗಳ ಫಲಿತಾಂಶ ಬಹಿರಂಗಗೊಂಡಿಲ್ಲ.
.ಎಂಡಿಎಚ್, ಎವರೆಸ್ಟ್ ಮಸಾಲೆ ಉತ್ಪನ್ನಗಳಲ್ಲಿ ಕೀಟನಾಶಕ ಪತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.