ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೈಜೀರಿಯಾ | ಬಾರ್ನೊ ರಾಜ್ಯದಲ್ಲಿ ಸರಣಿ ಬಾಂಬ್ ಸ್ಫೋಟ: 18 ಮಂದಿ ಸಾವು

Published 30 ಜೂನ್ 2024, 4:59 IST
Last Updated 30 ಜೂನ್ 2024, 4:59 IST
ಅಕ್ಷರ ಗಾತ್ರ

ಬಾರ್ನೊ(ನೈಜೀರಿಯಾ): ನೈಜೀರಿಯಾದ ಈಶಾನ್ಯ ರಾಜ್ಯ ಬಾರ್ನೊದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದು, 48 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ತುರ್ತು ಸೇವೆಗಳ ನಿರ್ವಹಣಾ ಸಂಸ್ಥೆಯನ್ನು(ಎಸ್‌ಇಎಂಎ) ಉಲ್ಲೇಖಿಸಿ ಸಿಎನ್‌ಎನ್‌ ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.

ಮದುವೆ ಸಮಾರಂಭ ನಡೆಯುತ್ತಿದ್ದ ಸಂದರ್ಭ ಶನಿವಾರ 3 ಗಂಟೆ ಸುಮಾರಿಗೆ ಮೊದಲ ಸ್ಪೋಟ ಸಂಭವಿಸಿದೆ. ಗ್ವೋಜಾ ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ಸ್ಟೋಟ ಮತ್ತು ಅಂತ್ಯಸಂಸ್ಕಾರದ ವೇಳೆ 3ನೇ ಸ್ಫೋಟ ಸಂಭವಿಸಿದೆ.

ಬಾರ್ನೊ ರಾಜ್ಯದ ತುರ್ತು ಸೇವೆಗಳ ನಿರ್ವಹಣಾ ಸಂಸ್ಥೆಯ (ಎಸ್‌ಇಎಂಎ) ಡಿಜಿ ಬರ್ಕಿಂಡೋ ಮುಹಮ್ಮದ್ ಸೈದು ಅವರು ಗ್ವೋಜಾ ಪಟ್ಟಣದ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರಲ್ಲಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ಸೇರಿದ್ದಾರೆ. ಸ್ಫೋಟದ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT